ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಕೆ. ಎಲ್.ಇ.ಎಸ್.ಜೆ.ಜಿ ವಾಣಿಜ್ಯ ಕಾಲೇಜು ಹುಬ್ಬಳ್ಳಿಯಲ್ಲಿ ನಡೆದ 2025-26 ನೇ ಸಾಲಿನ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಏಕ ಅಂತರ ಮಹಾವಿದ್ಯಾಲಯದ ,ದಿನಾಂಕ 7-11-2025 ರಂದು ನಡೆದ ಈಜು ಕ್ರೀಡಾ ಸ್ಪರ್ಧೆಯಲ್ಲಿ ನಮ್ಮ ಬಿ.ಜಿ.ವಿ. ಎಸ್ ಪದವಿ ಕಾಲೇಜು ರಾಮನಗರದ ಕ್ರೀಡಾ ಪಟು ಕು. ಓಂ ವೆಂಕಟೇಶ್ ಜವಳಿ ಇತನು
ಸ್ವಿಮ್ಮಿಂಗ್.1) 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಪ್ರಥಮ ಸ್ಥಾನ ಬಂಗಾರದ ಪದಕ.2) 100 ಮೀಟರ್ ಬ್ಯಾಕ್ ಸ್ಟ್ರೋಕ್ ದ್ವಿತೀಯ ಸ್ಥಾನ ಬೆಳ್ಳಿಯ ಪದಕ.3)50 ಮೀಟರ್ ಬ್ಯಾಕ್ ಸ್ಟ್ರೋಕ್ ದ್ವಿತೀಯ ಸ್ಥಾನ ಬೆಳ್ಳಿಯ ಪದಕ.4) 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ದ್ವಿತೀಯ ಸ್ಥಾನ ಬೆಳ್ಳಿಯ ಪದಕ. 5) 100ಮೀಟರ್ ಫ್ರೀ ಸ್ಟೈಲ್ ಕಂಚಿನ ಪದಕ. ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾನೆ .

ಇವರ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾರವಾರ ಅಧ್ಯಕ್ಷರು ಶ್ರೀಮತಿ ವನಿತಾ ಪ್ರಭಾಕರ ರಾಣೆ, ಶ್ರೀ ಉಲ್ಲಾಸ ನಾಯ್ಕ , ಶ್ರೀ ಮಂಜುನಾಥ ಪವಾರ್, ಶ್ರೀ ಕಿಶೋರ ರಾಣೆ . ಶ್ರೀ ಗಜೇಂದ್ರ ಗಾಂದಲೆ ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯರು ಶ್ರೀ ಅನಿಲ್ ಕುಮಾರ ದೇವರಸಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಸಂಜಯ ಜಿ. ಗೌಡ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಶುಭವನ್ನು ಹಾರೈಸಿರುತ್ತಾರೆ.