ಸುದ್ದಿ ಕನ್ನಡ ವಾರ್ತೆ
ಭಟ್ಕಳ:ತಾಲೂಕಿನ ಆಸರಕೇರಿ ಜಂಬೂರಮಠದ ಕೆರೆಯಲ್ಲಿ ಮೀನು ಹಿಡಿಯಲು ಬಾಲಕ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ದಿ ನ್ಯೂ ಇಂಗ್ಲಿಷ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದ ಶಶಿಧರ ಯೋಗೇಶ ಮೋಗೇರ (15)ಮೃತ ಬಾಲಕ.ಈತನು ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲು ತೆರಳಿದಾಗ ಕಾಲು ಜಾರಿ ಬಿದ್ದಿದ್ದು,ತಕ್ಷಣವೇ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆಯ ಬಗ್ಗೆ ಮೃತ ಬಾಲಕನ ಅಣ್ಣ ಬಾಲಾಜಿ ಯೋಗೇಶ ಮೋಗೇರ ಭಟ್ಕಳ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಕುರಿತು ಭಟ್ಕಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
