ಸುದ್ದಿಕನ್ನಡ ವಾರ್ತೆ
ಪಣಜಿ; ಚಲನಚಿತ್ರ ಕ್ಷೇತ್ರದಲ್ಲಿ 50 ವರ್ಷಗಳ ಪ್ರಯಾಣ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ರವರಿಗೆ ಗೋವಾದಲ್ಲಿ ನಡೆಯುವ 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷವಾಗಿ ಅವರನ್ನು ಸನ್ಮಾನಿಸಲಾಗುತ್ತಿದೆ. ನವೆಂಬರ್ 28 ರಂದು ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಜನೀಕಾಂತ್ ರವರನ್ನು ಸನ್ಮಾನಿಸಲಾಗುತ್ತಿದೆ.
ಈ ಹಿಂದೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಜನೀಕಾಂತ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಆದರೆ ಪ್ರಸಕ್ತ ಬಾರಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರ ಉಪಸ್ಥಿತಿ ವಿಶೇಷವಾಗಿರಲಿದೆ. ನವೆಂಬರ್ 20 ರಿಂದ 28 ರವರೆಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯಲಿದೆ. ನವೆಂಬರ್ 20 ರಂದು ಉಧ್ಘಾಟನಾ ಸಮಾರಂಭ ಹಾಗೂ ನವೆಂಬರ್ 28 ರಂದು ಸಮಾರೋಪ ಸಮಾರಂಭವು ಪಣಜಿ ಸಮೀಪದ ಬಾಂಬೋಲಿಂ ಬಳಿ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂ ನಲ್ಲಿ ನಡೆಯಲಿದೆ. ರಜನೀಕಾಂತ್ ರವರು ವಯಸ್ಸಾಗಿದ್ದರೂ ಕೂಡ ಅವರ ಚಲನಚಿತ್ರಗಳು ಇಂದಿಗೂ ಕೂಡ ಬಾಕ್ಸ ಆಫಿಸ್ ಸೂಪರ್ ಹಿಟ್ ಚಲನಚಿತ್ರಗಳೇ ಆಗಿವೆ.
ರಜನೀಕಾಂತ್ ರವರ ಅಭಿಮಾನಿಗಳ ಬಳಗವೇ ತುಂಬಾ ದೊಡ್ಡದಿದೆ.
ಚಲನಚಿತ್ರ ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ರವರು ನೀಡಿರುವ ಕೊಡುಗೆಯನ್ನು ಭಾರತ ಸರ್ಕಾರವು ದಾಖಲಿಸಿದೆ. ಅವರಿಗೆ 2000 ರಲ್ಲಿ ಪದ್ಮಭೂಷಣ ಹಾಗೂ 2016 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇಷ್ಟೇ ಅಲ್ಲದೆಯೇ 2021 ರಲ್ಲಿ ರಜನೀಕಾಂತ್ ರವರಿಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಕೂಡ ಲಭಿಸಿದೆ. 2019 ರಲ್ಲಿ ರಜನೀಕಾಂತ್ ರವರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುವರ್ಣ ಮಹೋತ್ಸವ ಆಯ್ ಕಾನ್ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಇಷ್ಟೇ ಅಲ್ಲದೆಯೇ ಹತ್ತು ಹಲವು ಪುರಸ್ಕಾರ ಕೂಡ ಇವರಿಗೆ ಲಭಿಸಿದೆ.
