ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗಣೇಶಗುಡಿ ,ಇವುಗಳ ಸಹಯೋಗದಲ್ಲಿ ನಡೆದ ಪ್ರಧಾನಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬಾಮಣಗಿ ಶಾಲೆಯ ವಿದ್ಯಾರ್ಥಿಗಳು ಕಿರಿಯರ ವಿಭಾಗದ ಸ್ಪರ್ಧೆಯಲ್ಲಿ ದೀಪಾ ಮರಾಟೆ(ಕನ್ನಡ ಕಂಠಪಾಠ), ವೀಣಾ ಬಾಳಯೆಕರ (ಅಭಿನಯ ಗೀತೆ)ಪ್ರಥಮ.ಸಂಕೇತ ನಾಯ್ಕ (ಇಂಗ್ಲಿಷ್ ಕಂಠಪಾಠ) ದ್ವಿತೀಯ. ವಿರಾಜ್ ಗಾವಡಾ(ಕಥೆ ಹೇಳುವುದು),ರಿತ್ವಕ್ ನೈಕೋಡಿ (ಆಶು ಭಾಷಣ) ತೃತೀಯ. ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಸಾಯಿನಾಥ ಗಾಂವ್ಕರ(ಚಿತ್ರಕಲೆ),ರೋಹಿಣಿ ರಾಯ್ಕರ(ಅಭಿನಯಗೀತೆ),ಚೈತನ್ಯಗವಸ(ಆಶು ಭಾಷಣ ಮತ್ತು ಕಥೆ ಹೇಳುವುದು),ಪ್ರಾಪ್ತಿ ನಾಯ್ಕ(ಹಿಂದಿ ಕಂಠಪಾಠ)- ಪ್ರಥಮ. ರೋಹಿಣಿ ರಾಯ್ಕರ (ಕನ್ನಡ ಕಂಠಪಾಠ),ರುಕ್ಮಿಣಿ (ದೇಶಭಕ್ತಿ ಗೀತೆ),ರೋಷನಿ ಗಾವಡ(ಕವನವಾಚನ),ತನವಿ ಗಾವಡ(ಧಾರ್ಮಿಕ ಪಠಣ)- ದ್ವಿತೀಯ. ದಿಕ್ಷಾ ಗಾವಡ(ಕ್ಲೇ ಮಾಡೆಲಿಂಗ್,ಇಂಗ್ಲಿಷ್ ಕಂಠಪಾಠ),ವಿನಾಯಕ ಗಾವಡ (ಮಿಮಿಕ್ರಿ) ತೃತೀಯ. ವಿದ್ಯಾರ್ಥಿಗಳ ಈ ಸಾಧನೆಗೆ ಬಾಮಣಗಿ ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ ಸಹ ಶಿಕ್ಷಕಿಯರಾದ ವಂದನಾ ದೇಶಪಾಂಡೆ,ಪಿಲೋಮೀನ ನರೋನ,ಸುಮನಾ ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಶಿಕ್ಷಕರುಗಳಿಗೆ ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ಪಾಲಕರು,ಪೋಷಕರು,ಶಾಲೆಯ ಹಳೆಯ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.