ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ-ಕರ್ನಾಟಕ ಸಂಪರ್ಕಿಸುವ ಚೋರ್ಲಾ ಘಾಟ್ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯುದ್ದಕ್ಕೂ ಇರುವ ಹೊಂಡಗಳಿಂದಾಗಿ ಪ್ರಯಾಣಿಕರು ಜೀವ ಕೈಯ್ಯಲ್ಲಿ ಹಿಡಿದು ಓಡಾಟ ನಡೆಸುವಂತೆ ಪರಿಸ್ಥಿತಿ ಎದುರಾಗಿದೆ. ಕಣಕುಂಬಿಯಿಂದ ಜಾಂಬೋಟಿ ವರೆಗಿನ ರಸ್ತೆ ಭಾರಿ ಹೊಂಡಗಳಿಂದ ಕೂಡಿದ್ದು ಜನತೆ ಈ ಮಾರ್ಗದಲ್ಲಿ ಓಡಾಟ ನಡೆಸುವುದು ಕಷ್ಠಕರ ಎಂಬಂತಾಗಿದೆ.
ರಸ್ತೆ ಹದಗೆಟ್ಟಿರುವುದರಿಂದ ಈ ಮಾರ್ಗದಲ್ಲಿ ಹೆಚ್ಚಿನ ಅಪಘಾತ ಸಂಭವಿಸುವುದಕ್ಕೂ ಕಾರಣವಾಗಿದೆ. ಇಷ್ಟೇ ಅಲ್ಲದೆಯೇ ದೊಡ್ಡ ದೊಡ್ಡ ಹೊಂಡ ಬಿದ್ದಿರುವುದರಿಂದ ವಾಹನಗಳು ಕೂಡ ಅಲ್ಲಲ್ಲಿ ಕೆಟ್ಟು ನಿಂತಿರುವುದು ಕೂಡ ಕಂಡುಬರುತ್ತಿದೆ.
ಗೋವಾಕ್ಕೆ ಪ್ರತಿದಿನ ಅಗತ್ಯ ವಸ್ತುಗಳ ಪೂರೈಕೆಗೆ ಬೆಳಗಾವಿ-ಗೋವಾ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದೆ. ಇಷ್ಟೇ ಅಲ್ಲದೆಯೇ ಗೋವಾ-ಬೆಳಗಾವಿ ಜನರು ಕೂಡ ಪ್ರತಿದಿನದ ಅಗತ್ಯತೆಗೆ ಸಂಪರ್ಕ ಓಡಾಟ ನಡೆಸುವ ರಸ್ತೆಯಾಗಿರುವುದರಿಂದ ಈ ರಸ್ತೆಯನ್ನು ಬೇಗನೆಯ ದುರಸ್ತಿಪಡಿಸಬೇಕೆಂದು ಪ್ರಯಾಣಿಕರು ಸರ್ಕಾರವನ್ನು ಆಘ್ರಹಿಸಿದ್ದಾರೆ.
