ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯ ಸರ್ಕಾರವು ರಾಜ್ಯದ ಸಂಸ್ಕøತಿ ಪರಂಪರೆ ಮುಂದುವರೆಸಿಕೊಂಡು ಹೋಗಲು ಬದ್ಧವಾಗಿದೆ. ತ್ರಿಪುರಾರಿ ಪೌರ್ಣಿಮಾ ಉತ್ಸವಕ್ಕೆ ರಾಜ್ಯ ಮಟ್ಟದ ಸ್ಥಾನ ನೀಡಿ ಸರ್ಕಾರವೇ ಈ ಉತ್ಸವವನ್ನು ಆಯೋಜಿಸುತ್ತಿದೆ. ಸಣ್ಣ ಸಣ್ಣ ನೌಕೆಗಳನ್ನು ಸಿದ್ಧಪಡಿಸುವ ಮೂಲಕ ಸ್ಫರ್ಧಾಳುಗಳಿಗೆ ನೌಕಾ ತಯಾರಿಕೆಯ ಸೂಕ್ಷ್ಮತೆಯನ್ನು ಕೂಡ ಕಾಣಬಹುದಾಗಿದೆ. ಯುವಕರು ಹೊಸ ತಂತ್ರಜ್ಞಾನ ಹಾಗೂ ಸಂಶೋಧನೆ ಕ್ಷೇತ್ರದಲ್ಲಿಯೂ ಮುಂದುವರೆದಿದ್ದಾರೆ. ಇಂದು ವಿಕಸಿತ ಭಾರತ ಹಾಗೂ ವಿಕಸಿತ ಗೋವಾವನ್ನು ಕೂಡ ಕಾಣಬಹುದಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

ಗೋವಾ ರಾಜ್ಯದ ವಿಠ್ಠಲಾಪುರ ಸಾಖಳಿಯಲ್ಲಿ ವಾಳವಂಟಿ ನದಿಯಲ್ಲಿ ತ್ರಿಪುರಾರಿ ಪೌರ್ಣಿಮಾ ಉತ್ಸವವನ್ನು ಆಚರಿಸಲಾಯಿತು. ಈ ಉತ್ಸವ ವೀಕ್ಷಣೆಗೆ ವಾಳವಂಟಿ ನದಿ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಉಪಸ್ಥಿತರಿದ್ದು ಮಾತನಾಡಿದರು.

ಪೌರ್ಣಮಿಯ ಮಧ್ಯರಾತ್ರಿ ವಾಳವಂಟಿ ನದಿಯಲ್ಲಿ ವಿಶೇಷ ಚಿಕ್ಕ ಚಿಕ್ಕ ಬೋಟ್ ಸ್ಫರ್ಧೆ ಆಯೋಜಿಸಲಾಗಿತ್ತು. ಗೋವಾ ರಾಜ್ಯ ಕಲಾ ಮತ್ತು ಸಂಸ್ಕøತಿ ಖಾತೆ , ರಾಜ್ಯ ಪ್ರವಾಸೋದ್ಯಮ ಇಲಾಖೆ, ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳ, ಮಾಹಿತಿ ಮತ್ತು ಪ್ರಸರಣ ಇಲಾಖೆ, ವಿಠ್ಠಲಾಪುರ ಶ್ರೀ ವಿಠ್ಠಲ ರಖುಮಾಯಿ ದೇವಸ್ಥಾನ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಫರ್ಧೆಯಲ್ಲಿ 30 ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಬೋಟ್ ಗಳು ಪಾಲ್ಗೊಂಡಿದ್ದವು.

ಉತ್ಸವದ ಆರಂಭದಲ್ಲಿ ಶ್ರೀಕೃಷ್ಣನ ಮೆರವಣಿಗೆ ನಡೆಯಿತು. ವಿಠ್ಠಲಾಪುರ ಗ್ರಾಮವನ್ನು ಪ್ರದಕ್ಷಿಣೆ ಹಾಕಿ ನಂತರ ರಾತ್ರಿ ನೌಕಾ ಸ್ಫರ್ಧೆ ನಡೆಸಲಾಯಿತು.
ಈ ನೌಕಾ ಸ್ಫರ್ಧೆ ಕಾರ್ಯಕ್ರಮದಲ್ಲಿ ಶಾಸಕ ಪ್ರೇಮೇಂಟ್ರ ಶೇಟ್, ಕಾರಾಪುರ ಪಂಚಾಯತ ಅಧ್ಯಕ್ಷ ಲಕ್ಷ್ಮಣ ಗುರವ್, ಮತ್ತಿತರರು ಉಪಸ್ಥಿತರಿದ್ದರು.