ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಆತ್ಮೀಯ ನಂದಿಗದ್ದೆ ಗ್ರಾಮ ಪಂಚಾಯತನ ರೈತ ಬಾಂಧವರೇ
ಇದೇ ತಿಂಗಳ
ದಿನಾಂಕ 07 ರ ಶುಕ್ರವಾರದಂದು PKVY
ಯೋಜನೆಯ ಮುಂದಿನ ಹಂತವಾಗಿ… ತೋಟಗಾರಿಕೆ ಇಲಾಖೆ ಜೋಯಿಡ ಹಾಗೂ SCODWES ಸಂಸ್ಥೆ ಶಿರಸಿ ಇವರ ಸಹಯೋಗದಲ್ಲಿ ರೈತರಿಗೆ ಕೃಷಿ ಮಾಹಿತಿ
ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವಿಷಯ 1 : ಸಾವಯವ ಕೃಷಿಯ ಮಹತ್ವ ಹಾಗೂ ಅನುಕೂಲಗಳು & ಮಣ್ಣಿನ ಆರೋಗ್ಯ ಮತ್ತು ಪರೀಕ್ಷೆ ಸಂಪನ್ಮೂಲ ವ್ಯಕ್ತಿಗಳು : ಶ್ರೀ ಶಂಕರ ಹೆಗಡೆ ( ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು ಶಿರಸಿ )
ವಿಷಯ 2: ಸಾವಯವ ಗೊಬ್ಬರದ ವಿಧಗಳು ಹಾಗೂ ಬಳಸುವ ವಿಧಾನ ಮತ್ತು ಸಾವಯವ ಗೊಬ್ಬರದ ತಯಾರಿಕೆಯ ಪ್ರಾತ್ಯಕ್ಷಿಕೆ
ಸಂಪನ್ಮೂಲ ವ್ಯಕ್ತಿಗಳು : ಶ್ರೀ ಡಿ ಜೆ ಪಟಗಾರ ( ನಿವೃತ್ತ ಕೃಷಿ ಅಧಿಕಾರಿಗಳು ಶಿರಸಿ )
ಸ್ಥಳ :
1. ನಂದಿಗದ್ದೆ ಬಯಲು ರಂಗ ಮಂದಿರ
ಸಮಯ : ಬೆಳಿಗ್ಗೆ 10 ಘಂಟೆಯಿಂದ – 1ಘಂಟೆ
2. ಸಹಕಾರಿ ಸಂಘ ಯರಮುಖ
ಸಮಯ : ಮಧ್ಯಾಹ್ನ 2 ಘಂಟೆಯಿಂದ – 5 ಘಂಟೆಯ ವೆರೆಗೆ ಎಲ್ಲಾ ರೈತರು ಇದರ ಲಾಭ ಪಡೆದು ಕೊಳ್ಳಲು P K V Y ನ ಅಮರ ಬಾಗ್ವತ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
