ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಸಂಸದ ರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ಬುಧವಾರ ತಾಲೂಕಿನಲ್ಲಿ ಮಿಂಚಿನ ಸಂಚಾರ ನಡೆಸಿದ್ದು ತಾಲೂಕಿನ ಬಾಜಪ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರ ವಾದಂತಾಗಿದೆ, ಬರುವ ಶನಿವಾರ ಜೋಯಿಡಾ ದಲ್ಲಿ ನಡೆಯ ಲಿರುವ ಆರ್ ಎಸ್ ಎಸ್ ಪಥಸಂಚಲನಕ್ಕೆ ಇದುಇನ್ನಷ್ಟು ಹುರುಪು ನೀಡಿದoತಾಗಿದೆ.
ತಮ್ಮ ಖಾಸಗಿ ಕೆಲಸದ ನಿಮಿತ್ತ ಬಂದ ಕಾಗೇರಿ ಯವರು ಅಣಶಿ ಯಿಂದ ಆರಂಭಿಸಿ ರಾಮನಗರದ ವರೆಗೂ ಹೋಗಿ ಬಾ ಜ ಪಾ ಕಾರ್ಯಕರ್ತರನ್ನು ಮಾತಾಡಿಸುತ್ತಾ ಪಕ್ಷ ಭೇದ ಮರೆತು ಎಲ್ಲರನ್ನೂ ಮಾತಾಡಿಸುತ್ತ ತಮ್ಮ ಘನತೆ ಗಾoಭೀರ್ಯವನ್ನು ಹೆಚ್ಚಿಸಿಕೊಂಡರು ಜೋಯಿಡಾ ದಲ್ಲಿ ಪಕ್ಷದ ಪ್ರಮುಖ ರಾದ ಅರುಣ್ ಕಾಮರೆಕಾರ,ಸಿದ್ದುಜೋಕೆರಿ ಆರ್ ವಿ ದಾನಗೇರಿ ರೂಪೇಶ್ ಹುಡಸಾ ಸೇರಿದಂತೆ ಸಾಕಷ್ಟು ಜನರನ್ನು ಕಂಡು ಮಾತನಾಡಿದರು.
ಜೋಯಿಡಾ ದಲ್ಲಿ ಪಕ್ಷದ ಕಾರ್ಯ ಕರ್ತರು ಹಿತೈಷಿ ಗಳನ್ನು ಕಂಡು ನಂತರ ತಮ್ಮ ಹಳೆಯ ಗೆಳೆಯ ಆನಂದ್ ಪೋಕಳೆ ಯವರಿಗೂ ಅಚ್ಚರಿ ಹುಟ್ಟಿಸಿದರು. ಆನಂದ್ ಪೋಕಳೆ ಮನೆಗೆ ಹೋಗಿ ಅವರೊಂದಿಗೆ ಕೆಲವು ಕಾಲ ಮಾತುಕತೆ ನಡೆಸಿದರು. ಪೋಕಳೆ ಅವರ ಮಗ ಯುವ ದುರೀಣ ಶ್ಯಾಮ್ ಪೋಕಳೆ ಅವರೊಂದಿಗೆ ಮಾತನಾಡಿ ಶನಿವಾರ ನಡೆಯಲಿರುವ ಪಥ. ಸಂಚಲನ ದಲ್ಲಿ ಭಾಗವಹಿಸುವಂತೆ ಕರೆ ನೀಡಿರುವ ವಿಷಯ ಶ್ಯಾಮ ಅವರಿಂದ ತಿಳಿದು ಬಂದಿದೆ.
ಒಟ್ಟಾರೆ ತಾಲೂಕಿನಲ್ಲಿ ಸಂಸದರು ಬಂದು ಹೋಗಿದ್ದು ಕಾರ್ಯಕರ್ತ ರಷ್ಟೇ ಅಲ್ಲ ಜನಸಾಮಾನ್ಯರು ಕೂಡ ಅವರ ಸಂಚಾರದ ಬಗ್ಗೆ ಮೆಲುಕು ಹಾಕುತ್ತಿದ್ದಾರೆ. ತಾಲೂಕಿನಲ್ಲಿ ಜನರು ಸಂಸದರ ಮೇಲೆ ಬಹಳಷ್ಟು ನಂಬಿಕೆಯನ್ನು ಇಟ್ಟು ಕೊಂಡಿದ್ದಾರೆ ರೈತರ ಹಾಳಾದ ಬೆಳೆಗೆ ಬೆಳೆ ವಿಮೆ ಸಿಗಬೇಕಾಗಿದೆ,ಬಿ ಎಸ್ ಎನ್ ಎಲ್ ನೆಟ್ವರ್ಕ್ ಸರಿಯಾಗ ಬೇಕಾಗಿದೆ, ತಾಲೂಕಿಗೆ ಕೇಂದ್ರ ಸರಕಾರದಿಂದ ಮಂಜೂರಿಯಾಗಿರುವ 47 ನೆಟ್ವರ್ಕ್ ಟವರು ಗಳ ಕಾರ್ಯಾಚರಣೆ ಆಗ ಬೇಕಾಗಿದೆ ಹಿಂದುಳಿದ ಹಳ್ಳಿ ಗಳಲ್ಲಿ ಪ್ರಧಾನ ಮಂತ್ರಿ ಯವರ ಯೋಜನೆಯ ರಸ್ತೆ ಸೇತುವೆ ಗಳು ಆಗಬೇಕಾಗಿವೆ, ಇವೆಲ್ಲವುಗಳ ಬಗ್ಗೆ ಸ್ಥಳೀಯ ಬಾಜಪ ದವರು ಸಂಸದರೊಂದಿಗೆ ಸಂಪರ್ಕ ಇಟ್ಟು ಕೊಂಡಿರುವ ಕಾರಣ ಇನ್ನಷ್ಟು ಹುರುಪು ಕಂಡು ಬಂದಿದೆ ಎಂದು ತಿಳಿದು ಬಂದಿದೆ
