ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಾ ಕೇಂದ್ರದ ಬಿ. ಜಿ. ವಿ. ಎಸ್. ಕಾಲೇಜಿನ ವಿದ್ಯಾರ್ಥಿ ಕಾವ್ಯಾ ದಾನವೆನ್ನವರ ಹರಿಯಾಣಾದ ಪಾಣಿಪತ ನಲ್ಲಿ ಇಂದು ನಡೆದ ರಾಷ್ಟ್ರ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ನಮ್ಮ ರಾಜ್ಯ, ಜಿಲ್ಲೆ ಹಾಗೂ ಜೋಯಿಡಾ ತಾಲೂಕಿಗೆ ಕೀರ್ತಿ ತಂದಿದ್ದಾಳೆ.

ಇಂದು ಬುಧವಾರ ಪಾಣಿಪತ್ ನ ಕುಸ್ತಿ ಕ್ರೀಡಾಂಗಳದಲ್ಲಿ ಬಂಗಾರದ ಪದಕಕ್ಕೆ ಹೊರಾಡಿ ಕೊನೆಗೆ ಕಂಚಿನ ಪದಕಕ್ಕೆ ತೃಪ್ತಿ ಪಡೆಯುವಂತಾಯಿತು ಇಂದು ನಡೆದ ಅಂತಿಮ ಹಣಾಹಣಿಯಲ್ಲಿ ಕಾವ್ಯ ತನ್ನ ಪ್ರತಿಸ್ಪರ್ಧಿ ಯನ್ನು ಮಣಿಸಿ ತೃತೀಯ ಸ್ಥಾನ ಪಡೆದಿರುತ್ತಾಳೆ.

ಇವಳ ಸಾಧನೆಗೆ ಬಿ. ಜಿ. ವಿ. ಎಸ್. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ವನಿತಾ ರಾಣೆ, ಉಪಾಧ್ಯಕ್ಷ ಉಲ್ಲಾಸ ನಾಯ್ಕ, ಕಾರ್ಯದರ್ಶಿಗಳಾದ ಮಂಜುನಾಥ ಪವಾರ, ಕಿಶೋರ ರಾಣೆ, ಹಾಗೂ ಸ್ಥಳಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ ದೇಸಾಯಿ, ಕಾರ್ಯದರ್ಶಿ ರವಿ ರೆಡ್ಕರ್, ಸಂತೋಷ ಮಂತೇರೊ ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ತರು, ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಶೆಟ್ಟಿ, ದೈ. ಶಿ. ಉಪನ್ಯಾಸಕ ಪಾಂಡುರಂಗ ಪಟಗಾರ, ಉಪನ್ಯಾಸಕ ವೃಂದ ಮತ್ತು ತಾಸಲೂಕಿನ ವಿವಿಧ ಸಂಘಟನೆಗಳು ಕಾವ್ಯ ಳ ಸಾಧನೆಗೆ ಅಭಿನಂದಿಸಿದ್ದಾರೆ. ಕಾವ್ಯ ಹಳಿಯಾಳದ ಕುಸ್ತಿ ಪಟು ತುಕಾರಾಂ ರವರಲ್ಲಿ ತರಬೇತಿ ಪಡೆದಿದ್ದಾರೆ