ಸುದ್ದಿ ಕನ್ನಡ ವಾರ್ತೆ
ಶಿರಸಿ:ಮೈ ಭಾರತ್ ಸರ್ದಾರ್ ವಲ್ಲಭಾಯಿ ಪಟೇಲ್ ಅವರ 150 ನೇ ಜನ್ಮದಿನದ ನಿಮಿತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ದಿನಾಂಕ: 5. 11.2025 ರಂದು ಬೆಳಿಗ್ಗೆ 10:30 ಗಂಟೆಗೆ ಹೊನ್ನಾವರದಲ್ಲಿ ಏಕತಾ ನಡಿಗೆ ಕಾರ್ಯಕ್ರಮಕ್ಕೆ ಮಾನ್ಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಚಾಲನೆಯನ್ನು ನೀಡಲಿದ್ದಾರೆ.
ಅದೇ ರೀತಿಯಾಗಿ ದಿನಾಂಕ್ಶ: 06.11.2025 ರಂದು ಬೆಳಿಗ್ಗೆ 10:30 ಗಂಟೆಗೆ ಹಳಿಯಾಳದ ಶ್ರೀ ಶಿವಾಜಿ ಮೈದಾನದಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ಇದರ ಕುರಿತು ಶಿರಸಿಯ ಮಾನ್ಯ ಸಂಸದರ ಕಾರ್ಯಾಲಯದಲ್ಲಿ ಪತ್ರಿಕಾ ಪ್ರಕಟಣೆ ಮಾಡಿ ಈ ಎರಡು ಕಾರ್ಯಕ್ರಮಗಳು ಕುರಿತು ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ
ಲೋಕೇಶ್ ಕುಮಾರ್ ಮೈ ಭಾರತ್ ಉಪನಿರ್ದೇಶಕರು ಭಾರತ ಸರ್ಕಾರ, ಶಿವಾಜಿ ನರಸಾನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಏಕತಾ ನಡಿಗೆ ಕಾರ್ಯಕ್ರಮದ ಜಿಲ್ಲಾ ಸಂಚಾಲಕ. ಗುರುಪ್ರಸಾದ ಹೆಗಡೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಹ ಸಂಚಾಲಕರಾದ ಮಂಜುನಾಥ ಜನ್ನು, ಪ್ರಮೋದ ನಾಯ್ಕ. ಶರ್ಮಿಳಾ ಮಾದನಗೇರಿ. ಉಪಸ್ಥಿತರಿದ್ದರು..
