ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ರಾಮನಗರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಶಿಂದೋಳಿಯಲ್ಲಿ ಸಡಗರ ಸಂಭ್ರಮದಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕನ್ನಡಮ್ಮ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಮಾತನಾಡಿ ಕನ್ನಡ ರಾಜ್ಯೋತ್ಸವದ ಆಚರಣೆಯ ಹಿನ್ನಲೆ,ಉದ್ದೇಶ,ಬಾಷೆ,ಕನ್ನಡ ಸಾಹಿತ್ಯ,ಸಂಸ್ಕೃತಿಯ ಕುರಿತು ಮಾತನಾಡುತ್ತಾ ಕನ್ನಡ ನೆಲದಲ್ಲಿ ಹುಟ್ಟಬೇಕೆಂದರೆ ನಾವೆಲ್ಲರೂ ಪುಣ್ಯ ಮಾಡಿದ್ದೇವೆ, ಏಕೆಂದರೆ ಭುವನೇಶ್ವರಿ ದೇವಿಯೇ ನಮ್ಮನ್ನು ಈ ನಾಡಿನಲ್ಲಿ ಹುಟ್ಟುವಂತೆ ಮಾಡಿದ್ದು, ನಾವು ಭಾಗ್ಯವಂತರು ಚಿನ್ನದ ನಾಡು, ಕವಿ ರತ್ನತ್ರಯರ ಬೀಡಾಗಿದೆ, ನಾವೆಲ್ಲರೂ ಈ ನುಡಿಯನ್ನು, ನಾಡನ್ನು ಉಳಿಸಿ ಬೆಳೆಸ ಬೇಕಾಗಿದೆ ಎಂದು ಹೇಳಿದರು.
ಸಹ ಶಿಕ್ಷಕಿಯಾದ ವಿದ್ಯಾ ಮೇಡಂ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಕುರಿತಾದ ಹಾಡನ್ನು ಹಾಡಿದರು.ಸಹ ಶಿಕ್ಷಕರಾದ ಆನಂದ ಪಿ ಶಿಕ್ಷಕರು ಮಾತನಾಡಿ, ಕನ್ನಡ ನಮ್ಮ ನರ ನಾಡಿಗಳಲ್ಲಿ ಹರಿದಾಡುವಂತಾಗಬೇಕು ಎಂದು ಹೇಳಿದರು .ಕಾರ್ಯಕ್ರಮವನ್ನು ಆನಂದ ಸಹ ಶಿಕ್ಷಕರು ಸ್ವಾಗತಿಸಿ,ನಿರೂಪಿಸಿ,ವಂದಿಸಿದರು.ಶಾಲೆಯ ವಿದ್ಯಾರ್ಥಿಗಳು ಕನ್ನಡ ಭಾಷೆಯ ಕುರಿತು ಭಾಷಣ ಗೀತೆಗಳನ್ನು ಹಾಡಿದರು.
