ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರ ಕೌಶಲ್ಯಾಭಿವೃದ್ದಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ರಾಷ್ಟ್ರೀಯ ಜೀವನೋಪಾಯ ಅಭಿಯಾನ- ಕರ್ನಾಟಕ,ತಾಲೂಕಾ ಪಂಚಾಯತ ಜೋಯಿಡಾ,ಗ್ರಾಮ ಪಂಚಾಯತ ನಂದಿಗದ್ದೆ,ಹರಿಪ್ರಿಯ ಸಂಜೀವಿನಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ನಂದಿಗದ್ದೆ ಇವುಗಳ ಸಹಯೋಗದಲ್ಲಿ ಪರಿವರ್ತನೆ ತಂಬಾಕು ಮುಕ್ತ ಯುವಜನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ದೇಸಾಯಿ,ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ, ಸದಸ್ಯರಾದ ಧವಳೋ ಗಣೇಶ ಸಾವರ್ಕರ್,ಶೋಭಾ ಆರ್,ಗ್ರಾಮ ಪಂಚಾಯತ ಕಾರ್ಯದರ್ಶಿ ಗಜಾನನ ಸಾವರ್ಕರ್, ಸಂಜೀವಿನಿ ಗ್ರಾಮ ಪಂಚಾಯತ ಒಕ್ಕೂಟದ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಎಂ.ಬಿ.ಕೆ ಭಾರತಿ ಹೆಗಡೆ,ಕೃಷಿ ಸಖಿ ಉಷಾ ದೇಸಾಯಿ,ಸ್ವಸಹಾಯ ಸಂಘಗಳ ಸದಸ್ಯರು,ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ದಯಾನಂದ,ಪರಂಪರಾಗತ ಕೃಷಿ ವಿಕಾಸ ಯೋಜನೆಯ ಅಮರ ಭಾಗವತ,ಅರಣ್ಯ ಇಲಾಖೆಯ ಸಿಬ್ಬಂದಿಗಳು,ಗ್ರಾಮ ಪಂಚಾಯತ ಪಂಚಾಯತ ಸಿಬ್ಬಂದಿಗಳು ಇದ್ದರು.