ಸುದ್ದಿ ಕನ್ನಡ ವಾರ್ತೆ

ಗೋಕರ್ಣದ ಹೆಮ್ಮೆ ಕಾವ್ಯಶ್ರೀ ಕೂರ್ಸೆ – ಗೋಕರ್ಣದ ಕೂರ್ಸೆ ಮನೆತನದ ಶ್ರೀ ಲಕ್ಸ್ಮಿನಾರಾಯಣ ಕೂರ್ಸೆ ದಂಪತಿಗಳ ಪುತ್ರಿ ಕಾವ್ಯಶ್ರೀ ಕೂರ್ಸೆ ಅವರು ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿ ಕಮ ರ್ಷಿಯಲ್ ಪೈಲೆಟ್ ಲೈನ್ಸಸ್ ಪಡೆದು ತಮ್ಮ ಜೀವನದ ಮಹತ್ವದ ಗುರಿಯನ್ನು ಸಾಧಿಸಿದ್ದಾರೆ.ಇವರು ತಮ್ಮ ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಶಿಕ್ಷಣವನ್ನು ಗೋವಾ ರಾಜ್ಯದಲ್ಲಿ ಮುಗಿಸಿ ಮಹಾರಾಷ್ಟದ ಬಾರಾಮತಿ ವಿಮಾನ ತರಬೇತಿ ಕೇಂದ್ರದಲ್ಲಿ ಒಟ್ಟು 200 ಗಂಟೆಗಳ ಹಾರಾಟ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೋಳಿಸಿದ್ದಾರೆ.

ಬಾಲ್ಯದಿಂದಲೇ ವಿಮಾನ ಯಾನ ಕ್ಷೇತ್ರದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಕಾವ್ಯಶ್ರೀ ಅವರು ತಮ್ಮ ಕನಸನ್ನು ಸಕರಾಗೊಳಿಸಲು ನಿರಂತರ ಶ್ರಮ ಪಟ್ಟು ಅಭ್ಯಾಸ ಮಾಡಿದ್ದು ಇಂದು ಅವರ ಪರಿಶ್ರಮಕ್ಕೆ ಫಲ ದೊರೆತಿದೆ. ಅವರ ಈ ಸಾಧನೆ ಕುಟುಂಬದವರಿಗಷ್ಟೇ ಅಲ್ಲದೆ ಗೋಕರ್ಣ ದ ಊರಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.

ಅವರ ಮುಂದಿನ ದಿನಗಳಲ್ಲಿ ಅತೀಶೀಘ್ರದಲ್ಲಿ ಯಶಸ್ವಿe ಮಹಿಳಾ ಪೈಲೆಟ್ ಆಗಿ ಬೆಳೆಯುವ ಅವಕಾಶ ಒದಗಿ ಬರಲಿ ಅನ್ನುವದೇ ಎಲ್ಲರ ಹಾರೈಕೆಯಾಗಲಿ.