ಸುದ್ದಿ ಕನ್ನಡ ವಾರ್ತೆ

.ಜೋಯಿಡಾ:31-10-2025 ರಂದು ತಾಲೂಕಿನ ರಾಮನಗರ ಪರಿವೀಕ್ಷಣಾ ಗ್ರಹ (ಐಬಿ) ದಲ್ಲಿ ಮಾನ್ಯ ಆರ್ ವಿ ದೇಶಪಾಂಡೆ ಸಾಹೇಬರು ಅಧ್ಯಕ್ಷರು ಆಡಳಿತ ಸುಧಾರಣೆ ಹಾಗೂ ಶಾಸಕರುರವರೊಂದಿಗೆ ತಾಲೂಕಿನ ವಿವಿಧ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಸುದೀರ್ಘ ಚರ್ಚೆ ಮಾಡಲಾಯಿತು. ಮಾನ್ಯರು, ಸಮಾಧಾನದಿಂದ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರೋಪಾಯ ಕಂಡುಕೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

 

ಚರ್ಚೆಯಾದ ವಿಷಯಗಳು..

1) ದಿನಾಂಕ : 18-8-2003 ರ ನೊಟಿಪಿಕೆಶನ್, ಕಾಳಿ ಹುಲಿ ಯೋಜನೆಯ ಮೂಲ ನಿವಾಸಿಗಳ ಹಕ್ಕಿನ ಬಗ್ಗೆ.
2. ಅರಣ್ಯ ಅಧಿಕಾರಿಗಳು ಕಾನೂನು ಅರಿವು ಇಲ್ಲದೇ ಸ್ಥಳೀಯ ಮೂಲ ನಿವಾಸಿಗಳಿಗೆ ತೊಂದರೆ ನೀಡುವ ಬಗ್ಗೆ.
3. ಕೆ.ಟಿ.ಆರ್ ಪುನರ್ ವಸತಿ ಪ್ಯಾಕೇಜ್,
4. ಕುಮರಿ ಹಕ್ಕಲ ಜಮೀನಿನ ಬಗ್ಗೆ,
5. ಆರ್ಥಿಕ ಮತ್ತು ಸಾಮಾಜಿಕ ಹೊಣೆಗಾರಿಕೆ.
6. ಪ್ರವಾಸೋದ್ಯಮದಲ್ಲಿ ಸ್ಥಳಿಯರಿಗೆ ಮೊದಲ ಆದ್ಯತೆ.
7. 3/2 ಸಮುದಾಯ ಹಕ್ಕುಗಳು,
8. ಕಾಡಿನ ಕ್ರೂರ ಪ್ರಾಣಿಗಳಿಂದ ಪರಿಹಾರ ಪ್ಯಾಕೇಜ್ ಬಗ್ಗೆ.
9. ಸ್ಥಳಿಯರಿಗೆ ಮೊದಲ ಆದ್ಯತೆ ನೀಡಿ ಕೆ ಟಿ ಆರ್ ದಲ್ಲಿ ಖಾಯಂ ಉದ್ಯೋಗ ನೀಡುವ ಕುರಿತು.
10. ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದರೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ.
11. ಜಂಟಿ ಅರಣ್ಯ ಯೋಜನೆ ಜಾರಿ ಮಾಡುವ ಕುರಿತು.
12. ಅರಣ್ಯ ಅಧಿಕಾರಿಗಳು ಕಾನೂನು ಬಾಹಿರವಾಗಿ ಸ್ಥಳೀಯರ ಮನೆಗೆ ನುಗ್ಗಿ ದಾಂಧಲೆ ಮಾಡುವ ಬಗ್ಗೆ.
13. ಬಿ ಎಸ್ ಎನ್ ಎಲ್ ಟವರ ಗಳಿಗೆ ಕನೆಕ್ಷನ್ ನೀಡುವ ಬಗ್ಗೆ.
14. ಕಾಡಿನ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಕಾನೂನಿನ ಅಡಿಯಲ್ಲಿ ಅವಕಾಶ ಬಗ್ಗೆ.
15. ದಿನಾಂಕ:2-11-2022 ರಂದು ತಾ.ಪಂ.ಜೊಯಿಡಾದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಹೋರಾಟಗಾರರ ನಡುವೆ ಆದ ನಿರ್ಣಯಗಳು.
16. ಜೊಯಿಡಾ ಕೇಂದ್ರದಲ್ಲಿ ಅರಣ್ಯ ಕಾಲೇಜು ಮಂಜೂರು ಬಗ್ಗೆ.
17. ಅರಣ್ಯ ಅತಿಕ್ರಮಣ ಮತ್ತು ಜಿಪಿಎಸ್ ನಿಡುವ ಬಗ್ಗೆ. ಇನ್ನೂ ಅನೇಕ ಸಮಸ್ಯೆಗಳು.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಂಡರೆ ಇಲ್ಲಿಯೇ ಬದುಕಲು ಸಾಕಷ್ಟು ಅವಕಾಶಗಳು ಇವೆ. ಇಲ್ಲಿ ಕೈಗಾರಿಕೆಗಳು ಇಲ್ಲದೇ ಇರುವುದರಿಂದ ಇಲ್ಲಿನ ಸ್ಥಳೀಯ ಸಂಪತ್ತು ಬದುಕಿಗೆ ಆಧಾರವಾಗಿವೆ. ಇದರಿಂದ ಹೊರ ರಾಜ್ಯಗಳಿಗೆ ಹೋಗುವುದು ತಪ್ಪುತ್ತದೆ ಎಂದು ಶಾಸಕ ಆರ್ ವಿ ದೇಶಪಾಂಡೆ ಸಾಹೇಬರ ಗಮನ ಸೆಳೆಯಲಾಯಿತು.

ಸಮಸ್ಯೆಗಳು ಸುದಿರ್ಘವಾಗಿದ್ದರೂ, ಸಮಾಧಾನದಿಂದ ಆಲಿಸಿದ ಶಾಸಕ ಆರ್ ವಿ ದೇಶಪಾಂಡೆ ಸಾಹೇಬರು ಸಮಸ್ಯೆ ಸ್ಪಂದಿಸುವ ವಿಶ್ವಾಸ ನೀಡಿದ್ದಾರೆ. ಸರ್ಕಾರ ಮಟ್ಟದಲ್ಲಿ ಕ್ರಮ ಆಗುವ ಬಗ್ಗೆ ವಿಶ್ವಾಸ ಹೊಂದಲಾಗಿದೆ.. ದಿನಾಂಕ:8-10-2025 ರಂದು ಕುಂಬಾರವಾಡಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಸ್ಥಳಿಯರು ಶಾಂತವಾಗಿ ವಿವಿಧ ಹಕ್ಕುಗಳಿಗೆ ಆಗ್ರಹಿಸಿ ನಡೆಸಿದ ಹೋರಾಟದ ಭಾಗವಾಗಿ ಈ ಸಭೆ ನಡೆದಿದೆ.

ಈ ಸಂದರ್ಭದಲ್ಲಿ ಸುಭಾಷ ಗಾವಡಾ ಅಧ್ಯಕ್ಷರು ಜಿಲ್ಲಾ ಕುಣಬಿ ಸಮಾಜ, ಸುಭಾಷ ವೇಳಿಪ ಮಾಜಿ ಕಾರ್ಯದರ್ಶಿ ಕುಣಬಿ ಸಮಾಜ, ಪ್ರಸನ್ನ ಗಾವಡಾ ಕುಣಬಿ ಯುವ ಮುಖಂಡರು, ದಿವಾಕರ ಕುಂಡಲಕರ ಖಜಾಂಚಿ ಕುಣಬಿ ಸಮಾಜ, ದಯಾನಂದ ಕುಮಗಾಳಕರ ಕಾರ್ಯದರ್ಶಿ ತಾ.ಕು.ಸ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂಜಯ ಹಣಬರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ, ತಾ.ಪಂ.ಮಾಜಿ ಉಪಾಧ್ಯಕ್ಷ ವಿಜಯ ಪಂಡಿತ, ಕೃಷ್ಣಾ ದೇಸಾಯಿ ಅಖೇತಿ. ಅಕ್ಷಯ ರವಳ ಯುವ ಕಾಂಗ್ರೆಸ್ ಅಧ್ಯಕ್ಷ, ಮುಂತಾದವರು ಇದ್ದರು.