ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಜೋಯಿಡಾ ತಾಲ್ಲೂಕಿನಾದ್ಯoತ ಬಿಡದೇ ಮಳೆ ಸುರಿಯುತ್ತಿದೆ, ಇದು ನಾಗರಿಕರಿಗೆ ತುಂಬಾ ತಲೆ ಬಿಸಿ ತಂದಿದೆ, ದೈನಂದಿನ ವ್ಯವಹಾರಕ್ಕೆ ಮತ್ತೆ ಮುಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಯೋಚಿಸಿದಂತೆ ಕೆಲಸ ಕಾರ್ಯಗಳು ನಡೆಸಲು ತೊಂದರೆ ದಾಯಕ ವಾಗಿದೆ.

ಗುರುವಾರ ಕಡಿಮೆ ಆಗಿದ್ದ ಮಳೆ ನಿಂತಿರಬಹುದೆಂದು ನಿರೀಕ್ಸಿಸಿಸಿದ ಜನರಿಗೆ ಈ ಮಳೆಯಿಂದ ಚಿಂತೆ ಮತ್ತೆ ಜಾಸ್ತಿ ಆದಂತಾಗಿದೆ, ಅದರಲ್ಲೂ ಕೃಷಿ ಬದುಕು ಕಟ್ಟಿ ಕೊಂಡವರ ಸ್ಥಿತಿ ಯಾರಿಗೂ ಬೇಡ ಎಂಬ ಪರಿಸ್ಥಿತಿ ಬಂದಿದೆ, ಹೂವಾಡುತ್ತಿರುವಮತ್ತುಬೆಳೆಯುತ್ತಿರುವ ಬತ್ತ ಬೆಳೆಯದೆ ಕೊಳೆಯುತ್ತಿದೆ ಹೂವಾಡುತ್ತಿರುವ ತೆಂಗು ಬಾಳೆ ಗಳಿಗೆ ದುಂಬಿಗಳು ಬಾರದೇ ಬಿದ್ದು ಹೋಗುತ್ತಿವೆ ಕಳೆದ ಮೇ ತಿಂಗಳಿನಿಂದಲೇ ಸುರಿಯುತ್ತಿರುವ ಮಳೆಗೆ ರೈತರು ಬದುಕು ಕಟ್ಟಲು ಸಾಧ್ಯವಾಗದೇ ಮುಂದೇನು ಎಂದು ಚಿಂತಿಸುತ್ತಿದ್ದಾರೆ.

ಅಡಿಕೆ ತೋಟದಲ್ಲಿ ಕಾಲು ಹುಗಿಯುವಷ್ಟು ಮಣ್ಣು ಮೆತ್ತಗಾಗಿದೆ ಅಡಿಕೆ ಮರಗಳು ನಿಲ್ಲದೇ ಬೀಳುತ್ತೀವೆ ಬಿದ್ದ ಮರಗಳಿಗೆ, ಕೊಳೆಯಿಂದ ಹಾನಿಯಾದ ಅಡಿಕೆ ತೆಂಗು ಮತ್ತು ಕಾಳು ಮೆಣಸು ಗಳಿಗೆ ತೋಟಗಾರಿಕೆ ಇಲಾಖೆ ಯಾಗಲಿ ಸರಕಾರ ವಾಗಲಿ ಯಾವುದೇ ಪರಿಹಾರ ನೀಡುತ್ತಿಲ್ಲ, ಇದಕ್ಕೆ ಅನುದಾನ ಇಲ್ಲ ಎನ್ನುತ್ತಾರೆ, ಇಂತ ಸ್ಥಿತಿಯಲ್ಲಿ ಅನುದಾನಕ್ಕೆ ಇಲಾಖೆಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕಾಗುತ್ತದೆ, ಅದನ್ನುಇಲಾಖೆಗಳುಮಾಡುತ್ತಿಲ್ಲ ಜನಪ್ರತಿನಿದಿಗಳು ಈ ಕೆಲಸವನ್ನು ಮಾಡಿಸ ಬೇಕು, ಇದರಿಂದಾಗಿ ಇಲಾಖೆಗಳು ಪರಿಹಾರ ಇಲ್ಲ ಎಂದು ರೈತರನ್ನು ಸಾಗಹಾಕುತ್ತಿವೆ, ಸರಕಾರದಿಂದ ಅತಿವೃಷ್ಟಿ ಪರಿಹಾರ ಬಂದಾಗ ಅಲ್ಲಿ ಗುತ್ತಿಗೆ ದಾರರು ಅಧಿಕಾರಿಗಳು ಸೇರಿ ಬಂದ ಹಣವನ್ನು ರಸ್ತೆ ಸೇತುವೆ ಹಾಳಾಗಿದೆ ಎಂದು ಖರ್ಚು ಮಾಡುತ್ತಾರೆ, ರೈತ ದೇಶದ ಬೆನ್ನೆಲುಬು ಎನ್ನುತ್ತಾ ರೈತನಿಗೆ ಆದ ಹಾನಿ ಯನ್ನು ಅತಿವೃಷ್ಟಿ ಹಾನಿ ಯಿಂದ ಬಂದ ಹಣ ದಿಂದ ನೀಡದೇ ರೈತನ ಬೆನ್ನೆಲುಬು ಮುರಿ ಯುತ್ತಾರೆ ಹೀಗಾಗಿ ರೈತರು ದುಡಿದು ದುಡಿದು ಮೇಲಕ್ಕೆ ಬರಲಾಗದೆ ಇದ್ದ ಸ್ಥಿತಿಯಲ್ಲೆ ಇರುತ್ತಾರೆ ಬೆಳೆ ವಿಮೆ ಕೂಡ ಎರಡು ವರ್ಷ ದ ಹಣ ಬಾಕಿ ಇದೆ ಸರಕಾರ ವಿಮೆ ಹಣವನ್ನ ಕೊಡಿಸಿ ರೈತರಿಗೆ ನೆರವಾಗಲಿ ಎಂದು ರೈತರು ಕೇಳಿದ್ದಾರೆ.