ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಗಾಂಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಮಲಕರ್ಣಿ (ನಿವಜ್)ಯಲ್ಲಿ ಪ್ರಮೋದ ಬಾಂಡೋಲಕರ ಇವರು ಕಾರ್ಯ ನಿಮಿತ್ತ ಮನೆಯಿಂದ ಜೋಯಿಡಾಕ್ಕೆ ಬರುವಾಗ ಭತ್ತದಗದ್ದೆಯ ಪಕ್ಕದಲ್ಲಿಯ ಕೆಂಪು ಹೂವಿನ ದಾಸವಾಳ ಗಿಡದ ಮೇಲೆ ಕುಳಿತು ಹೂವಿನ ಮಕರಂದ ಹೀರುವ ಚಿಟ್ಟೆಯೊಂದನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಚಿಟ್ಟೆಯ ಪೋಟೋವನ್ನು ಕ್ಲಿಕ್ಕಿಸಿದ್ದಾರೆ.

ಈ ಪೋಟೋವನ್ನು ಮಾಧ್ಯಮಕ್ಕೆ ನೀಡಿದಾಗ ಚಿತ್ರದಲ್ಲಿರುವ ಚಿಟ್ಟೆಯು ಬ್ಲೂ ಮೋರ್ಮನ್ (Blue Mormon) ಆಗಿದೆ. ಇದರ ವೈಜ್ಞಾನಿಕ ಹೆಸರು Papilio polymnestor.
ಇದು ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡುಬರುವ ಒಂದು ದೊಡ್ಡ ಸ್ವಾಲೋಟೇಲ್ ಚಿಟ್ಟೆ.

ಇದರ ರೆಕ್ಕೆಗಳು ಕಪ್ಪು ಬಣ್ಣದಲ್ಲಿದ್ದು, ಹಿಂಭಾಗದ ರೆಕ್ಕೆಗಳ ಮೇಲೆ ನೀಲಿ ಬಣ್ಣದ ದೊಡ್ಡ ಪ್ಯಾಚ್‌ಗಳನ್ನು ಹೊಂದಿರುತ್ತದೆ ಎನ್ನಲಾಗಿದೆ.