ಸುದ್ದಿ ಕನ್ನಡ ವಾರ್ತೆ

ಬೆಂಗಳೂರು:2025 -26 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.ಒಟ್ಟು 70 ಸಾಧಕರನ್ನು ಆಯ್ಕೆ ಮಾಡಲಾಗಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿ ಅಕ್ಟೋಬರ 30 ಗುರುವಾರ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಿಸಿದರು.

ಈ ಬಾರಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಳಗೋಡಿನ ಯಕ್ಷಗಾನ ಭಾಗವತರಾದ ಕೆ.ಪಿ.ಹೆಗಡೆ ಎಂದು ಪ್ರಸಿದ್ಧರಾದ ಕೃಷ್ಣ ಪರಮೇಶ್ವರ ಹೆಗಡೆಯವರು ಬಡುಗು ತಿಟ್ಟೆ ಕಲಾ ಪ್ರಕಾರದಲ್ಲಿ ಯಕ್ಷಗಾನ ಭಾಗವತಿಕೆಯ ಮೂಲಕ ಪರಿಚಿತರಾದವರು.

ಕೆ.ಪಿ.ಹೆಗಡೆಯವರು ನೂರಾರು ಕಲಾವಿದರನ್ನು,ಭಾಗವತರನ್ನು ಸೃಷ್ಟಿ ಮಾಡುವುದರ ಜೊತೆ,ಅನೇಕ ಯಕ್ಷಗಾನ ಕಲಾವಿದರಿಗೆ ಗುರುಗಳಾಗಿದ್ದು, ಯಕ್ಷಗಾನದ ದ್ರೋಣಾಚಾರ್ಯ ಎಂದೇ ಪ್ರಸಿದ್ಧಿಯನ್ನು ಹೊಂದಿದವರು. ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.