ಸುದ್ದಿ ಕನ್ನಡ ವಾರ್ತೆ
ಜೊಯೀಡಾ: ತಾಲೂಕಿನಲ್ಲಿ ಮೇ ತಿಂಗಳಿಂದ ನಿರಂತರವಾಗಿ ಮಳೆ ಮುಂದುವರೆದಿದೆ. ಬುಧವಾರವು ನಿರಂತರ ಮಳೆ ಮುಂದುವರೆದಿದೆ. ಗದ್ದಯಲ್ಲಿ ಭತ್ತ, ತೋಟದಲ್ಲಿ ಅಡಿಕೆ ಬೆಳೆ ಹಾಳಾಗುತ್ತದೆ . ರೈತರಿಗೆ ಸಂಕಷ್ಟ ತಂದಿದೆ.
ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮಳೆ ಆಶ್ರಿತ ಮುಂಗಾರು ಭತ್ತದ ಬೇಸಾಯ ಮಾಡಲಾಗಿದ್ದು. ಈಗಾಗಲೇ ಭತ್ತದ ಗದ್ದೆಗಳಲ್ಲಿ ತೆನೆ ಬಿಟ್ಟಿದ್ದು ನವೆಂಬರ ತಿಂಗಳಲ್ಲಿ ಕಟಾವ್ ಪ್ರಾರಂಭವಾಗಲಿದೆ. ಜುಲೈ ತಿಂಗಳಲ್ಲಿ ನಾಟಿ ಮಾಡಿದಾಗನಿಂದ ನಿರಂತರ ಮಳೆ ಆಗಿ ಭತ್ತ ಕೊಳೆ ರೋಗ ಮತ್ತು ಎಲೆ ಚುಕ್ಕೆರೋಗ, ಎಲೆ ಸುರುಳಿ ರೋಗ ಬಾಧಿತವಾಗಿದೆ.ಈಗ ಅಕಾಲಿಕ ಮಳೆಯಿಂದ ಭತ್ತದ ತೆನೆ ಕಪ್ಪು ರೋಗದ ಭಾಧೆಗೊಳಗಾಗಿದೆ. ಇಳುವರಿ ಸರಿಯಾಗಿ ಬಾರದೇ ರೈತರ ಬದುಕು ಕಂಗಾಲಾಗಿದೆ.
ತಾಲೂಕಿನ ಗುಂದ, ಅವುರ್ಲಿ, ಉಳವಿ,ಪೋಟೋಲಿ, ಚಾಪೋಲಿ,ನಗರಿ,ಹುಡಸಾ ಸೇರಿದಂತೆ ಇನ್ನಿತರ ಭಾಗದಲ್ಲಿ ಅಡಿಕೆ ಬೆಳೆ ಹೆಚ್ಚು ಬೆಳೆಯಲಾಗುತ್ತದೆ. ತೊಟಗಾರಿಕೆ ಇಲಾಖೆ ಅಧಿಕಾರಿಗಳು ಶಾಸಕರ ಕೆಡಿಪಿ ಸಭೆಯಲ್ಲಿ ಅಡಿಕೆ ಬೆಳೆ ನಿರಂತರ ಮಳೆಗೆ ಬೆಳೆ ಹಾನಿಯಾದ ಬಗ್ಗೆ ಮಾಹಿತಿ ನೀಡಿದ್ಡಾರೆ.ಅಡಿಕೆಗೆ ಜುಲೈ, ಅಗಷ್ಟ ತಿಂಗಳಲ್ಲಿ ಹೆಚ್ಚಾಗಿ ಕೊಳೆ ರೋಗದಿಂದ ಅಡಿಕೆ ಬಿದ್ದು ತುಂಬಾ ಹಾನಿಯಾಗಿದೆ.ಈಗಲೂ ಕೊಳೆ ರೋಗ ಮುಂದುವರೆದಿದೆ, ಉಳಿದ ಅಡಿಕೆ ಕೊಯ್ಲು ಪ್ರಾರಂಭಿಸಲು ನಿರಂತರ ಮಳೆ ಕಾಡುತ್ತಿದೆ. ಅಡಿಕೆ ಕೊಯ್ಲು ಮಾಡಲಿಕ್ಕೆ ಆಗದೇ ರೈತರು ಸಂಕಷ್ಟದಲ್ಲಿ ಇದ್ದಾರೆ.
ಮೇ 17 ರಿಂದ ನಿರಂತರ ಮಳೆ.
ತಾಲೂಕಿನಲ್ಲಿ ಮೇ 17 ರಿಂದ ನಿರಂತರವಾಗಿ ಮಳೆ ಮುಂದುವರೆದಿದೆ. ಈ ವರ್ಷದ ಮೃಗಶಿರಾ,ಆರಿದ್ರಾ ಆಶ್ಲೇಷಾ, ಉತ್ತರಾ ನಕ್ಷತ್ರಗಳಲ್ಲಿ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಅಕ್ಟೋಬರ್ ತಿಂಗಳಲ್ಲಿ ಮಳೆ ನಿರಂತರ ಆಗುತ್ತದೆ. ಬುಧವಾರ ಭಾರಿ ಮಳೆ ಆಗಿದೆ.
ಕಾಡು ಪ್ರಾಣಿಗಳ ಕಾಟ.
ಭತ್ತದ ಬೆಳೆಗೆ ಹಂದಿ, ಕಾಡುಕೋಣ ಕಾಟ ಹೆಚ್ಚಾಗಿದೆ, ಅಡಿಕೆ ಬೆಳೆಗೆ ಕೋತಿ, ಬಾಳೆಗೆ ಮಂಗ, ಹಂದಿ ಕಾಟ ಹೆಚ್ಚಾಗಿದೆ. ಭತ್ತ, ಅಡಿಕೆ ರೋಗಕ್ಕೆ ಒಳಗಾಗಿದೆ. ಸಂಕಷ್ಟದ ದಿನಗಳು ಬಂದಿದೆ. ಪರಿಹಾರ ಇಲ್ಲವೇ ವಿಮಾ ಹಣದ ನೆರವು ಅಗತ್ಯ.
ನಿರಂತರ ಮಳೆಯಾಗುತ್ತಿದೆ. ಇದು ಪ್ರಕೃತಿ ವಿಕೋಪ ಎಂದು ಪರಿಗಣಿಸಿ ವಿಮಾ ಕಂಪನಿಗಳು ರೈತರ ನೆರವಿಗೆ ಧಾವಿಸಬೇಕು. ಇಲ್ಲದಿದ್ದರೆ ಸರ್ಕಾರ ಪರಿಹಾರ ನೀಡಿ ರೈತರಿಗೆ ಧೈರ್ಯ ನೀಡಬೇಕಾಗಿದೆ.
ಸರ್ಕಾರ ರೈತರ ನೆರವಿಗೆ ಬರಬೇಕು.
ಅಕ್ಟೋಬರ್ ತಿಂಗಳಲ್ಲಿ ನಿರಂತರ ಮಳೆಯಾಗುತ್ತಿದೆ. ರೈತರ ಭತ್ತ ಬೆಳೆ ಗದ್ದೆಯಲ್ಲಿ ಹಾಳಾಗುತ್ತಿದೆ. ಅಡಿಕೆ ತೋಟದಲ್ಲಿ ಕೊಳೆಯುತ್ತಿದೆ. ನೂರಾರು ಎಕರೆ ಬೆಳೆ ಹಾನಿಯಾಗಿದೆ. ಪ್ರಕ್ರತಿ ವಿಕೋಪ ಪರಿಹಾರ ನಿಧಿಯಿಂದ ಹಣ ನೀಡಿ ರೈತರಿಗೆ ಧೈರ್ಯ ನೀಡಬೇಕಾಗಿದೆ ಎಂದು
ಸುರೇಶ ಗಾವಡಾ
ರೈತ ಮುಖಂಡರು ಜೋಯಿಡಾರವರ ಮನವಿಯಾಗಿದೆ.

 
							 
			 
			 
			 
			 
		 
			 
			 
			 
			