ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಸಂತರಿಯಲ್ಲಿ ದೀಪಾವಳಿಯ ಹಬ್ಬದ ನಿಮಿತ್ತ ಹನ್ನೊಂದು ದಿನಗಳ ಕಾಲ ನಡೆದ ಶ್ರೀಕೃಷ್ಣ ಮೂರ್ತಿಯ ಪೂಜನ ಕಾರ್ಯಕ್ರಮ ಇಂದು ಮುಕ್ತಾಯಗೊಳ್ಳಲಿದೆ.

ದಿನಾಂಕ:20-10-2025 ರಂದು ಸೋಮವಾರ ಬೆಳಿಗ್ಗೆ ಶ್ರೀ ದೇವರ ಮೂರ್ತಿಯ ಸ್ಥಾಪನೆಯಾಯಿತು.ಹನ್ನೊಂದು ದಿನಗಳ ಕಾಲ ದಿನಾಲು ಬೆಳಿಗ್ಗೆ ಮತ್ತು ಸಂಜೆ ಆರತಿ ಕಾರ್ಯಕ್ರಮ, ಹಿರಿಯರು,ಪುರುಷರು,ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 29-10-2025 ರಂದು ಬುಧವಾರ ಹತ್ತನೇಯ ದಿನ ಬೆಳಿಗ್ಗೆ ಶ್ರೀ ದೇವರ ಮಹಾಪೂಜೆ,ತೀರ್ಥ,ಪ್ರಸಾದ ವಿತರಣೆ.ಮಧ್ಯಾಹ್ನ ಅನ್ನಪ್ರಸಾದ,ಸಂಜೆ ಭಜನಾ ಕಾರ್ಯಕ್ರಮ,ಚಿಕ್ಕ ಮಕ್ಕಳಿಂದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಭಕ್ತರ ಮೆರವಣಿಗೆಯ ಮೂಲಕ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಇಂದು ಅ.30( ಗುರುವಾರ) ನಡೆಯಲಿದೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ವಿನಂತಿಸಿದ್ದಾರೆ.