ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಪ್ರವಾಸೋದ್ಯಮ ಸೀಜನ್ ಆರಂಭಗೊಂಡಿದೆ. ಗೋವಾ ಪ್ರವಾಸಿ ತಾಣ ವೀಕ್ಷಿಸಲು ಗೋವಾಕ್ಕೆ ಆಗಮಿಸುವ ಪ್ಲ್ಯಾನ್ ಮಾಡಿದ್ದರೆ ಗೋವಾದಲ್ಲಿರುವ ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಂಡು ಎಚ್ಚರ ವಹಿಸಿ ಇಲ್ಲವಾದಲ್ಲಿ ಗೋವಾಕ್ಕೆ ಬಂದು ಹೆಚ್ಚಿನ ದಂಡ ತೆರುವುದು ಅನಿವಾರ್ಯವಾಗಲಿದೆ.

ಗೋವಾದಲ್ಲಿ ಇದೀಗ ಆರ್ಟಿಫಿಶಲ್ ಇಂಟಲಿಜನ್ಸ (ಎಐ) ಆಧಾರಿತ ಗೋವಾ ವೇಯಿಕಲ್ ವೆರಿಫಿಕೇಶನ್ ಸಿಸ್ಟಮ್ ನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ ತಂತ್ರಜ್ಞಾನದಿಂದಾಗಿ ಗೋವಾ ರಾಜ್ಯದಲ್ಲಿ ಸಾರಿಗೆ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಕಠಿಣವಾದಂತಾಗಿದೆ. ಈ ಹೊಸ ತಂತ್ರಜ್ಞಾನದಿಂದಾಗಿ ಗೋವಾಕ್ಕೆ ಬರುವ ಯಾವುದೇ ವಾಹನಗಳನ್ನು ಟ್ರಾಫಿಕ್ ಪೋಲಿಸರು ನಿಲ್ಲಿಸಿ ತಪಾಸಣೆ ನಡೆಸುವ ಅಗತ್ಯವೇ ಇಲ್ಲ. ಗೋವಾ ರಾಜ್ಯದ ಗಡಿ ಭಾಗದಲ್ಲಿ ಅಳವಡಿಸಲಾಗಿರುವ ಈ ಹೊಸ ತಂತ್ರಜ್ಞಾನದಿಂದಾಗಿ ಪ್ರವಾಸಿಗರ ವಾಹನ ಸ್ಕ್ಯಾನ್ ಆಗಿ ಸದರಿ ವಾಹನದ ಪಿಯುಸಿ, ವಿಮೆ, ಆರ್ ಸಿ ಈ ಕಾಗದಪತ್ರಗಳ ತಪಾಸಣೆಯಾಗಲಿದೆ. ಒಂದು ವೇಳೆ ಯಾವುದೇ ಕಾಗದಪತ್ರ ಅಪ್ ಡೇಟ್ ಆಗಿರದಿದ್ದಲ್ಲಿ ಸದರಿ ವಾಹನ ಮಾಲೀಕರಿಗೆ ಹೆಚ್ಚಿನ ಪ್ರಮಾಣದ ದಂಡ ಬೀಳಲಿದೆ.

ಒಂದು ವೇಳೆ ವಾಹನಕ್ಕೆ ಪಿಯುಸಿ ಇಲ್ಲದಿದ್ದರೆ 10,000 ರೂಗಳ ವರೆಗೆ ಭಾರಿ ದಂಡ ಬೀಳಲಿದೆ. ಒಂದು ವೇಳೆ ವಾಹನದ ವಿಮೆ ಮುಗಿದಿದ್ದರೆ ಮೊದಲ ಬಾರಿಗೆ 2000 ರೂ ದಂಡ ಎರಡನೇಯ ಬಾರಿಗೆ 4000 ರೂ ದಂಡ ಬೀಳಲಿದೆ. ಒಂದು ವೇಳೆ ವಾಹನದ ಕಾಗದಪತ್ರ ಮ್ಯಾಚ್ ಆಗದಿದ್ದರೆ ವಾಹನವನ್ನು ಅಲ್ಲಿಯೇ ತಡೆದು ನಿಲ್ಲಿಸಿ ಕಾಗದಪತ್ರಗಳ ತಪಾಸಣೆ ನಡೆಸಲಾಗುವುದು. ಸದ್ಯ ಗೋವಾ ಬೆಳಗಾವಿ ಗಡಿ ಭಾಗ ಮೋಲೆಮ್ ಚೆಕ್ ಪೋಸ್ಟನಲ್ಲಿ ಈ ಸಿಸ್ಟಮ್ ಅಳವಡಿಸಲಾಗಿದೆ. ಕಾರವಾರ-ಗೋವಾ ಗಡಿಯಲ್ಲಿಯೂ ಈ ಸಿಸ್ಟಮ್ ಅಳವಡಿಸಲಾಗಿದೆ. ಶೀಘ್ರದಲ್ಲಿಯೇ ಮಹಾರಾಷ್ಟ್ರ ಗೋವಾ ಗಡಿ ಭಾಗ ಪತ್ರಾದೇವಿ ಚೆಕ್ ಪೋಸ್ಟನಲ್ಲಿಯೂ ಈ ಸಿಸ್ಟಮ್ ಅಳವಡಿಕೆಯಾಗಲಿದೆ.

ಇದರಿಂದಾಗಿ ಗೋವಾಕ್ಕೆ ಬರುವ ಪ್ರವಾಸಿಗರು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡು ಗೋವಾಕ್ಕೆ ತಮ್ಮ ವಾಹನದಲ್ಲಿ ಆಗಮಿಸುವ ಮುನ್ನ ಈ ಎಲ್ಲ ಕಾಗದಪತ್ರಗಳು ಸರಿಯಾಗಿ ಇದೆಯೇ ಎಂದು ಪರಿಶೀಲಿಸಿಕೊಂಡು ಗೋವಾಕ್ಕೆ ಆಗಮಿಸಬೇಕಿದೆ. ಇಷ್ಟೇ ಅಲ್ಲದೆಯೇ ಕಾರಿನಲ್ಲಿ ಚಾಲಕರು ಸೀಟ್ ಬೆಲ್ಟ ಖಡ್ಡಾಯವಾಗಿ ಹಾಖಿಕೊಂಡು ಬರುವುದು ಮತ್ತು ಗೋವಾದ ರಸ್ತೆ ಬದಿಯಲ್ಲಿ ಬರೆದಿರುವ ಸೂಚನೆಯಂತೆಯೇ ಅಷ್ಟೇ ಕಿಮಿ ವೇಗವನ್ನು ಪಾಲನೆ ಮಾಡುವ ಅಗತ್ಯವಿದೆ. ಇಲ್ಲವಾದಲ್ಲಿ ಹೆಚ್ಚಿನ ದಂಡ ತೆರಬೇಕಾಗಲಿದೆ.


Artificial Intelligence (AI) based Goa Vehicle Verification System has now been implemented in Goa. Due to this smart technology, Goa has become stricter in terms of compliance with traffic rules in the state. Due to this new technology, there is no need for the traffic police to stop and check any vehicle entering Goa. Due to this new technology installed in the border area of ​​Goa state, the PUC, Insurance, RC documents of the said vehicle will be checked as a tourist vehicle scan. If any of the documents are not updated, the vehicle owner will be fined heavily.