ಸುದ್ದಿ ಕನ್ನಡ ವಾರ್ತೆ
ರಬಕವಿ-ಬನಹಟ್ಟಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಬಹಳಷ್ಟು ನುರಿತ ರಾಜಕಾರಣಿಗಳು, ಅನುಭವಿ ರಾಜಕಾರಣಗಳಾಗಿದ್ದು, ಹಿಂದಿನ ಪರಂಪರೆಯನ್ನು ಅವಲೋಕಿಸಿದಾಗ ಇಂಥ ತೀರ್ಮಾನ ಬಂದಿರುವ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಬೇಕು. ನಿಷ್ಟಕ್ಷಪಾತ ಮತ್ತು ಪಾರದರ್ಶಕ ತನಿಖೆಗೆ ಅವಕಾಶ ಸಿದ್ಧರಾಮಯ್ಯನವರು ನೀಡಬೇಕು ಎಂದು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡ ತಿಳಿಸಿದರು.

ಅವರು ಮಂಗಳವಾರ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯುವರು ಸಾಮಾಜಿಕ ನ್ಯಾಯದ ವಿರುದ್ಧವಿರುವುದಾಗಿ ಎಂದು ಹೇಳಿರುವುದು ಸರಿಯಲ್ಲ. ಅವರ ಆಡಳಿತದಲ್ಲಿಯ ಹಲವಾರು ಪ್ರಕರಣಗಳನ್ನು ನೋಡಿದಾಗ ಕಾಂಗ್ರೆಸ್ ಪಕ್ಷವೇ ಸಾಮಾಜಿಕ ನ್ಯಾಯದ ವಿರುದ್ಧ ಇದೆ ಎಂಬುದು ಗೊತ್ತಾಗುತ್ತದೆ ಎಂದು ಗದ್ದಿಗೌಡರ ತಿಳಿಸಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ಇದು ಸತ್ಯಕ್ಕೆ ಜಯವಾಗಿದೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡಿದ್ದು, ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಬಂದಿದೆ. ಬಿಜೆಪಿ ಮಿತ್ರ ಪಕ್ಷಗಳು ಮುಖಮಂತ್ರಿ ಸಿದ್ಧರಾಮಯ್ಯ ರಾಜೀನಾಮೆಗೆ ಹೋರಾಟ ಮಾಡುತ್ತವೆ. ಕೇವಲ ಮೂಡಾ ಹಗರಣದ ಹಣವನ್ನು ವರುಣಾ ಕ್ಷೇತ್ರಕ್ಕೆ ನೀಡಿದ್ದಾರೆ. ಅದೇ ರೀತಿಯಾಗಿ ಎಸ್.ಟಿ ನಿಗಮದ ರೂ. ೧೮೭ ಕೋಟಿಯಷ್ಟು ಹಣವನ್ನು ಕೂಡಾ ಲೂಟಿ ಮಾಡಿದ್ದಾರೆ. ಈ ಹಣವನ್ನು ಹಗಲು ದರೋಡಿ ಮಾಡಿದ್ದಾರೆ. ಖರ್ಗೆಯವರು ಕೂಡಾ ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ತಮ್ಮ ಕುಟುಂಬಕ್ಕೆ ಐದು ಎಕರೆ ಭೂಪ್ರದೇವನ್ನು ಪಡೆದುಕೊಂಡಿದ್ದಾರೆ. ಇದು ಕೂಡಾ ತನಿಖೆಯಾಗಬೇಕು.

ಈ ಸರ್ಕಾರದಿಂದ ಯಾವುದೆ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಯನ್ನು ಸರಿಯಾಗಿ ನೀಡುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ನಾಟಕ ಆಡುತ್ತಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ರಾಜ್ಯ ಮತ್ತು ರಾಜ್ಯದ ಜನತೆಯ ಬಗ್ಗೆ ಪ್ರೀತಿ ವಿಶ್ವಾಸವಿದ್ದರೆ ಕೂಡಲೇ ರಾಜೀನಾಮೆಯನ್ನು ನೀಡಬೇಕು ಎಂದು ಶಾಸಕ ಸಿದ್ದು ಸವದಿ ಅಗ್ರಹಿಸಿದರು.

ಡಾ.ಎಂ.ಎಸ್.ದಡ್ಡೆನ್ನವರ, ಗೋವಿಂದ ಡಾಗಾ, ಶ್ರೀಶೈಲ ಯಾದವಾಡ, ಲಕ್ಕಪ್ಪ ಪಾಟೀಲ, ಶ್ರೀಶೈಲ ಬೀಳಗಿ, ಚಿದಾನಂದ ಹೊರಟ್ಟಿ, ಭೀಮಶಿ ಪಾಟೀಲ ಸೇರಿದಂತೆ ಅನೇಕರು ಇದ್ದರು.