ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ ಗ್ರಾಮದ ಬಳಗಾರ ಮಜರೆಯ ಶ್ರೀಕಾಂತ ಸದಾನಂದ ಹೆಗಡೆಯವರ ಮನೆಯಲ್ಲಿ ಭಗವದ್ಗೀತೆ ಸಪ್ತಾಹ ಕ್ಕೆ ಮುಖ್ಯ ಅರ್ಚಕರಾದ ಶಂಕರ ಆಳ್ಕೆಯವರು ದೀಪ ಪ್ರಜ್ವಲನ ಮಾಡುವ ಮೂಲಕ ಚಾಲನೆ ನೀಡಿದರು.

 

ಶ್ರೀಭಗವದ್ಗೀತಾ ಅಭಿಯಾನ- ಕರ್ನಾಟಕ,ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ,ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ(ರಿ) ಶಿರಸಿ(ಉ.ಕ)ಇವರ ಮಾರ್ಗದರ್ಶನದಲ್ಲಿ ಭಗವದ್ಗೀತೆಯ 11ನೇಯ ಅಧ್ಯಾಯದ ಪಠಣ ನಡೆಯಲಿದೆ.ಬಳಗಾರ ಮಜರೆಯ ಮಾತೆಯರು,ಭಕ್ತವೃಂದದವರು ಉಪಸ್ಥಿತರಿದ್ದರು.