ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ತ್ರೈಮಾಸಿಕ ಪ್ರಗತಿ
ಪರಿಶೀಲನಾ ಸಭೆ ಜೋಯಿಡಾ ದ ಪ, ಪೂ, ಕಾಲೇಜಿನಲ್ಲಿ ನಡೆಯಲಿದೆ ಹಳಿಯಾಳ ಜೋಯಿಡಾ ಹಾಗೂ ದಾಂಡೇಲಿ ಕ್ಷೆತ್ರದ ಶಾಸಕರು ರಾಜ್ಯ ಅಭಿವೃದ್ಧಿ ಸಮೀತಿ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಯವರ ಅಧ್ಯಕ್ಷ ತೆಯಲ್ಲಿ ಸಭೆ ನಡೆಯಲಿದೆ .
ಮಂಗಳವಾರ ಬೆಳಿಗ್ಗೆ 11 ಘಂಟೆಗೆ ಕಾಲೇಜಿನ ಅಭಿವೃದ್ಧಿ ಸಭೆಯಲ್ಲಿ ಭಾಗವಹಿಸುವರು ನಂತರ 11 30 ಕ್ಕೆ ತಾಲೂಕಾ ತ್ರೈಮಾಸಿಕ ಸಭೆ ಯಲ್ಲಿ ಪಾಲ್ಗೊಂಡು ಸಮಸ್ಯೆಗಳ ಪರಿಶೀಲನೆ ನಡೆಸುವರು. ಮದ್ಯಾಹ್ನ 1ಘಂಟೆಗೆ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಯಲ್ಲಿ ಪ್ರಧಾನ ಮಂತ್ರಿ ಯವರ (ಪಿ ಎಂ ಶ್ರೀ)ಯೋಜನೆ ಅಡಿಯಲ್ಲಿ ನಿರ್ಮಿಸುವ ಕೊಠಡಿ ಗಳ ಅಡಿಗಲ್ಲು ಸಮಾರಂಭ ದಲ್ಲಿ ಭಾಗವಹಿಸುವರು. ಮದ್ಯಾಹ್ನ 3 30 ಕ್ಕೆ ಉಳವಿ ಗ್ರಾಮ ಪಂಚಾಯತ ದಆಂಬೊಳಿ ಯಲ್ಲಿ ನಿರ್ಮಿಸಿದ ಶಾಲಾ ಕಟ್ಟಡ ಉದ್ಘಾಟಿಸುವರು ನಂತರ ಉಳವಿಯಲ್ಲಿ ನಿರ್ಮಿಸಲಿರುವ ಬಾಂದಾರ ಮತ್ತು ಕಾಲುವೆ ಗಳ ಶಂಕುಸ್ತಾಪನೆ ಮಾಡಲಿದ್ದಾರೆ ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ
