ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಕುಸ್ತಿ ಯಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬಿ. ಜಿ. ವಿ. ಎಸ್. ಪ. ಪೂ. ಕಾಲೇಜು ಜೋಯಿಡಾದ ಕುಸ್ತಿಪಟು ಕಾವ್ಯ ದಾನವೆನ್ನವರ ಅವರನ್ನು ಸನ್ಮಾನಿಸಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಬಿಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಮಂಜುನಾಥ ಶೆಟ್ಟಿ, ಕಾವ್ಯ ದಾನ್ವೆನ್ನರ ರವರ ಸತತ ಸಾಧನೆ ಇಂದು ಫಲಕೊಟ್ಟಿದೆ. ಕುಸ್ತಿಯಲ್ಲಿ ತನ್ನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮಳಾಗಿ ಗೆಲುವು ಸಾಧಿಸಿ ನಮ್ಮ ಕಾಲೇಜಿಗೆ, ಸಂಸ್ಥೆಗೆ, ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಇವಳು ರಾಷ್ಟ್ರೀಯ ಕುಸ್ತಿ ಸ್ಪರ್ಧಯಲ್ಲಿಯೂ ಸಾಧನೆ ಮಾಡುವಂತಾಗಲಿ ಎಂದು ಹಾರೈಸುವೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ರವಿ ರೆಡ್ಕರ್
ಮಾತನಾಡುತ್ತಾ, ನಮ್ಮ ಮಲೆನಾಡು ಕರಾವಳಿಯ ಭೂಪ್ರದೇಶದಲ್ಲಿ ನೈಸರ್ಗಿಕವಾಗಿ ಕ್ರೀಡಾ ಸಾಮರ್ಥ್ಯ ವನ್ನು ಹೊಂದಿರುವ ಕೆಚ್ಚೆದೆಯ ಕ್ರೀಡಾಳುಗಳಿದ್ದಾರೆ. ಸರಿಯಾದ ಮಾರ್ಗದರ್ಶನ, ತರಬೇತಿ ದೊರೆತರೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಬೆಳಗಬಲ್ಲವರಿದ್ದಾರೆ. ಇಂತವರನ್ನು ಗುರುತಿಸುವ ಕಾರ್ಯ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕಾವ್ಯ ದಾನ್ವೆನ್ನವರ ತಂದೆ ತುಕಾರಾಮ, ತಾಯಿ ರೂಪಾ, ಪ್ರಮುಖರಾದ ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ,ಕುಣಬಿ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ತಾಲೂಕಾ ಅಧ್ಯಕ್ಷ ಪ್ರೇಮಾನಂದ ವೇಳಿಪ, ದತ್ತಾರಾಮ ದೇಸಾಯಿ, ದೈ. ಶಿ. ಉಪನ್ಯಾಸಕ ಪಾಂಡುರಂಗ ಪಟಗಾರ, ಕಾಲೇಜಿನ ಉಪನ್ಯಾಸಕ ವೃಂದ ವಿದ್ಯಾರ್ಥಿ ಗಳು ಉಪಸ್ಥಿತರಿದ್ದ ಸಭೆ ಯಲ್ಲಿ ಜೋಯಿಡಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಡೊಂಬರ ಒಂದು ಸಾವಿರ ರೂಪಾಯಿ ನಗದು ನೀಡಿ ಪ್ರೊತಾಹಿಸಿ ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಗೆದ್ದರೆ ಐದು ಸಾವಿರ ರೂಪಾಯಿ ನೀಡುವುದಾಗಿಹೇಳಿ ಹಾರೈಸಿದರ.
