ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಡಪೋಲಿಯಲ್ಲಿ ಗ್ರಾಮೀಣ ತಂಡಗಳ ಮೂರು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಶ್ರೀ ಸೋಮನಾಥ ಯುವಕ ಸಂಘ ಹಾಗೂ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ನಡೆಯಿತು.

ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಯು ಅಕ್ಟೋಬರ 20 ರಿಂದ 22 ರವರೆಗೆ ನಡೆದ ಕ್ರಿಕೆಟ್ ಟೂರ್ನಿಯನ್ನು ಗಣ್ಯರು ಉದ್ಘಾಟಿಸಿದರು. ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಮೈಂಗಿಣಿ (ಅಣಶಿ)ತಂಡ,ರುಂಡಾಳಿ ತಂಡವು ದ್ವಿತೀಯ ಬಹುಮಾನ ಹಾಗೂ ಪಂದ್ಯ ಶ್ರೇಷ್ಠ,ಸರಣಿ ಶ್ರೇಷ್ಠ, ಉತ್ತಮ ಬ್ಯಾಟ್ಸಮನ್, ಉತ್ತಮ ಬೌಲರ್‌, ಉತ್ತಮ ಆಲ್ ರೌಂಡರ ಇನ್ನುಳಿದ ಆಕರ್ಷಕ ವೈಯುಕ್ತಿಕ ಬಹುಮಾನಗಳನ್ನು ವಿವಿಧ ತಂಡಗಳ ಆಟಗಾರರರು ಪಡೆದುಕೊಂಡರು.

ಪಂದ್ಯಾವಳಿಯಲ್ಲಿ ಸಂಘಟಕರು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರು.ಕ್ರೀಡಾಕೂಟವನ್ನು ಯಶಸ್ವಿಯಾಗಿ,ಅಚ್ಚುಕಟ್ಟಾಗಿ ಸಂಘಟಕರು ಸಂಘಟಿಸಿದ್ದರು.