ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀಕೃಷ್ಣಗಲ್ಲಿಯಲ್ಲಿ ದೀಪಾವಳಿಯ ಹಬ್ಬದ ನಿಮಿತ್ತ ಐದು ದಿನಗಳ ಕಾಲ ನಡೆದ ಶ್ರೀಕೃಷ್ಣ ಮೂರ್ತಿಯ ಪೂಜನ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ ನಿಮಿತ್ತ ದಿನಾಂಕ: 24-10-2025 ರಂದು ಶುಕ್ರವಾರ ಭಕ್ತರ ಮನರಂಜನೆಗಾಗಿ ಶ್ರೀಕೃಷ್ಣ ನಾಟ್ಯ ಮಂಡಳಿಯವರಿಂದ ಶ್ರೀಕೃಷ್ಣ ಹಡಪಡಕರ ವಿರಚಿತ ಹಾಸ್ಯಭರಿತ,ಸಾಹಸಮಯ,ಸಂಗೀತಮಯ “ಅನ್ಯಾಯಚಾ ಬದಲಾ”ಎಂಬ ಮರಾಠಿ ನಾಟಕ ಪ್ರದರ್ಶನ ನಡೆಯಿತು.
ನಾಟಕದ ಪುರುಷ ಪಾತ್ರದಲ್ಲಿ ಸುನಿಲ ದೇಸಾಯಿ,ಸಂದೀಪ ಮಿರಾಶಿ,ದತ್ತಾ ಸಾವಂತ,ಮೋಹನ ಗಾವಡೆ,ಸತೀಶ ಭಾಮೇಕರ,ರವಿ ಸುಧೀರ,ಗುರುದಾಸ ಮಾಪಸೇಕರ,ತುಳಸಿದಾಸ ಭಾಮೇಕರ,ನಾರಾಯಣ ಸೋನಾಲಕರ,ವಿಜಯ ಗಾಂವಕರ,ಸ್ತ್ರೀ ಪಾತ್ರದಲ್ಲಿ ತನ್ವಿ ಕಾರವಾರ ಉತ್ತಮವಾಗಿ ಅಭಿನಯಿಸಿದರು. ಸಂಗೀತ ವಿಭಾಗದಲ್ಲಿ ಮಾರುತಿ ಮಿರಾಶಿ ಸೀತಾವಾಡಾ,ತಬಲಾ ಸುನಿಲ ಪರಬ ರಾಮನಗರ, ಗಾಯಕ ಉಮೇಶ ಕಾಂಬಳೆ, ಗಾಯಕಿ ರೇಣುಕಾ ಕೆ.,ರೀದಂ ಪ್ಯಾಡ ಸುಭಾಷ ನಾಯ್ಕ ಕಾರವಾರ,ನಿರ್ದೇಶನ ಸಂದೀಪ ಮಿರಾಶಿ,ತೆರೆಯಮರೆಯಲ್ಲಿ ಶಶಿಕಾಂತ ಗಾವಡೆ,ಅನಂತ ನಾಯ್ಕ,ಮಂಜುನಾಥ ಆಯಕರ,ಪ್ರಕಾಶ ದೇಸಾಯಿ, ರಂಗಸಜ್ಜಿಕೆ,ಧ್ವನಿವರ್ಧಕ,ಶ್ರೀಪಾಯಿಕೇಶ್ವರ ಆರ್ಟ್ಸ ಬಾಂದೇಗಾಳಿ ಜೋಯಿಡಾ,ನಾಟಕದ ವ್ಯವಸ್ಥಾಪಕರು ಕುಮಾರ ತುಷಾರ ಕುಡತರಕರ, ಸಂಜು ನಾಯ್ಕ, ರಮೇಶ ಮಿರಾಶಿ.ಸ್ಟೇಜ್ ಮ್ಯಾನೇಜರ್,ಅಧ್ಯಕ್ಷರು ಸುನಿಲ ದೇಸಾಯಿ ಶ್ರೀಕೃಷ್ಣ ಮಂಡಲ, ಶ್ರೀಕೃಷ್ಣಗಲ್ಲಿ ರಾಮನಗರ ನಾಟಕದ ಪ್ರದರ್ಶನಕ್ಕೆ ಸಹಕಾರ ನೀಡಿದರು. ನಾಟಕ ಪ್ರದರ್ಶನದ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.
