ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನ ಪಣಸೋಲಿ ಯಲ್ಲಿ ಕಳೆದ ಎರಡು ತಿಂಗಳು ಗಳಿಂದ ಬಿ ಎಸ್ ಎನ್ ಎಲ್ 4G ನೆಟ್ವರ್ಕ್ ಬಂದಾಗಿತ್ತು. ಸಾರ್ವಜನಿಕ ರ ತೀವ್ರ ವಾದ ಪ್ರತಿಭಟನೆಯ ನಂತರ ಶನಿವಾರ ಸಾಯಂಕಾಲ 5 30 ರ ವೇಳೆಗೆ ನೆಟ್ವರ್ಕ್ ಪುನಃ ಪ್ರಾರಂಭ ವಾಗಿದೆ.

ಇದರಿಂದ ಸ್ಥಳೀಯರು ತುಂಬಾ ಸಂತಸ ವ್ಯಕ್ತ ಪಡಿಸಿ ನಮ್ಮ ಬೇಡಿಕೆಯನ್ನು ಗಮನಿಸಿದ ಮಾಧ್ಯಮದವರನ್ನು ಮತ್ತು ಮಾಧ್ಯಮ ದ ವರದಿ ಗಮನಿಸಿದ ಇಲಾಖೆ ಯವರನ್ನು ಅಭಿನಂದಿಸಿದ್ದಾರೆ. ದೂರವಾಣಿ ಗ್ರಾಹಕರಿಗೆ ತೊಂದರೆ ಆಗದಂತೆ ಬಾರತ ಸಂಚಾರ ನಿಗಮ ತನ್ನ ಕೆಲಸವನ್ನು ಶ್ರದ್ದೆ ಯಿಂದ ಮಾಡಬೇಕು. ಜನತೆ ಇಲಾಖೆಯ ನೆಟ್ವರ್ಕ್ ಉಪಯೋಗ ಮಾಡಿದ್ದಕ್ಕೆ ಹಣ ತುಂಬುತ್ತಾರೆ.

ಉಚಿತ ವಾಗಿ ಬಳಕೆ ಮಾಡುತ್ತಿಲ್ಲ ಜನತೆ ಬಳಕೆ ಮಾಡಿದಾಗ ಮಾತ್ರ ತಮಗೆ ಸಂಬಳ ಸಿಗುತ್ತದೆ ಎನ್ನುವುದನ್ನು ತಿಳಿದು ತಮ್ಮ ವೃತ್ತಿಯಲ್ಲಿ ಶಿಸ್ತನ್ನು ಅಳವಡಿಸಿ ಕೊಂಡರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಪಣ ಸೋಲಿ ಗ್ರಾಹಕರು ಇಲಾಖೆಗೆ ಕಿವಿಮಾತು ಹೇಳಿ ದ್ದಾರೆ. ಆದರೆ ಬಿ ಎಸ್ ಎನ್ ಎಲ್ ಇಲಾಖೆ ಅಣಶಿ ಯಲ್ಲಿ 4G ಅಳವಡಿಕೆ ಕೆಲಸ ಮಾಡದೇ ಇರುವುದನ್ನು ಗಮನಿಸಿ ಸ್ಥಳೀಯರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಮ್ಮ ಸಮಸ್ಯೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.