ಸುದ್ದಿ ಕನ್ನಡ ವಾರ್ತೆ

ಕಾರವಾರ:ರಾಜ್ಯದ ಕರಾವಳಿ ಹಾಗೂ ಗೋವಾ ಕರಾವಳಿಯ ಭಾಗದಲ್ಲಿ ಅಬ್ಬರದ ಗಾಳಿ ಮಳೆಯಾಗುತ್ತಿದೆ.

ಗಾಳಿ ಮಳೆಯಿಂದ ಅನೇಕ ಸಮಸ್ಯೆಗಳು ಉಂಟಾಗಿವೆ. ರಾಜ್ಯದಲ್ಲಿಯೇ ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾದ ವರದಿಯಾಗಿದ್ದು,ಕರಾವಳಿಯ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ.

ಕಾರವಾರದಲ್ಲಿ ಬೆಳಿಗ್ಗೆ ಸುರಿದ ಮಳೆಯಿಂದ ನಗರದ ರೈಲ್ವೆ ನಿಲ್ದಾಣದಕ್ಕೆ ಹೋಗುವ ಮಾರ್ಗದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಇನ್ನೂ ನೆರೆಯ ರಾಜ್ಯ ಗೋವಾದಲ್ಲೂ ಗಾಳಿ ಮಳೆಯ ಅಬ್ಬರ  ಮುಂದುವರೆದಿದೆ.