ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಉಳವಿಯಲ್ಲಿ ಶ್ರೀ ಚನ್ನಬಸವಣ್ಣ ನವರ ಜಯಂತೋತ್ಸವ ವನ್ನು ಭಕ್ತಿ ಬಾವಗಳಿಂದ ಕಾರ್ತಿಕ ಪ್ರತಿಫದೆಯಂದು ಆಚರಿಸಲಾಯಿತು ಅಂದು ಮುಂಜಾನೆ ಷಟ್ ಸ್ಥಳ ದ್ವಜಾರೋಹಣ ನಡೆದ ನಂತರ ಶ್ರೀ ಮಠದಲ್ಲಿ ಶ್ರೀದೇವರ ತೊಟ್ಟಿಲು ಪೂಜೆ ಸಡಗರ ದಿಂದ ನಡೆದುಭಕ್ತರು ತೊಟ್ಟಿಲು ತೂಗುವ ಮೂಲಕ ಸೇವೆ ನಡೆಸಿದರು ಭಕ್ತರ ಸಮೂಹದ ನಡುವೆ ಗಣ್ಯರು ಜ್ಯೋತಿ ಬೆಳಗಿದರು.

ನಂತರ ಪಲ್ಲಕ್ಕಿ ಉತ್ಸವ ವಿಜೃಂಭಣೆ ಯಿಂದ ನಡೆಯಿತು. ಚನ್ನ ಬಸವಣ್ಣ ನವರು ತಾಲೂಕಿನ ಉಳವಿಗೆ ತಮ್ಮ ವಚನ ಸಾಹಿತ್ಯದ ರಕ್ಷಣೆಗಾಗಿ 12ನೇ ಶತಮಾನ ದಲ್ಲಿ
ಬಂದರು. ಉಳವಿ ಯ ನಿಸರ್ಗ ಚನ್ನಬಸವಣ್ಣ ನವರಿಗೆ ತುಂಬಾ ಹಿಡಿಸಿತು, ತಮ್ಮ ವಚನ ಸಂರಕ್ಷಣೆಗೆ ಇದೇ ಜಾಗ ಸೂಕ್ತ ವೆಂದರಿತ ಅವರು ಇಲ್ಲಿಯೇ ಉಳಿವೆ ಎಂದರು, ಅವರ ಆ ನಿರ್ದಾರ ಇಂದು ಉಳಿವೆ ಎನ್ನುವದು ಪವಿತ್ರ ಕ್ಷೆತ್ರ ಉಳವಿ ಎಂದಾಗಿದೆ.

ಉಳವಿ ಯಲ್ಲಿಪ್ರತಿ ವರ್ಷ ಲಕ್ಷಾಂತರ ಜನರುಸೇರಿ ಅಣ್ಣ ಚನ್ನಬಸವಣ್ಣ ನವರ ಜಾತ್ರೆಯನ್ನು ಭಾರತ ಹುಣ್ಣಿಮೆಯ ಮಘಾ ನಕ್ಸತ್ರ ದಂದು ಆಚರಿಸುತ್ತಾರೆ ಜನತೆ ಆಮೂಲಕ ಭಕ್ತಿ ಬಾವ ಗಳಿಂದ ಸಂಭ್ರಮಿಸುತ್ತಾರೆ ಇಂದಿನ ಜಯಂತಿ
ಕಾರ್ಯಕ್ರಮ ದಲ್ಲಿ ಉಳವಿ ದೇವಸ್ಥಾನ ದ ಅಧ್ಯಕ್ಷ ಸಂಜಯ ಕಿತ್ತೂರ, ಸದಸ್ಯ ವಿರೇಶ್ ಕಂಬಳಿ, ಉಳವಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ಮೊಕಾಶಿ ವ್ಯವಸ್ಥಾಪಕ ಎಸ್ ಎಂ ಕಲ್ಮಠ ಶಾಸ್ತ್ರಿ ಸಾಮಾಜಿಕ ಕಾರ್ಯಕರ್ತ ಗೋಪಾಲ ಭಟ್ ಶಿವಪುರ ಮತ್ತು ಆಡಳಿತ ಪ್ರಮುಖರು ಗ್ರಾಮಸ್ಥರು ಉಪಸ್ಥಿತರಿದ್ದರು.