ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಾರ್ಟೋಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮೂರು ದಿನಗಳ ಗ್ರಾಮೀಣ ತಂಡಗಳ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಊರಿನ ಹಾಗೂ ಪರ ಊರಿನ ಗಣ್ಯರು ಕ್ರಿಕೆಟ್ ಪಂದ್ಯಾವಳಿಯನ್ನು ಉಧ್ಘಾಟಿಸಿದರು. ತಾಲೂಕಿನ ತಂಡಗಳು ಕ್ರೀಡಾ ಮನೋಭಾವನೆಯಿಂದ ಆಟವಾಡಿ,ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದರು. ಅಂತಿಮ ದಿನದ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ತಾಲೂಕಿನ ಎನ್.ಎಸ್.ಎಸ್ ಬಾಯ್ಸ್ ನಗರಬಾವಿ ತಂಡದ ಆಟಗಾರರು ಉತ್ತಮ ಆಟದ ಪ್ರದರ್ಶನ ನೀಡಿ ಬಾಮಣೆ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಚಾಂಪಿಯನ್ ತಂಡದ ಆಟಗಾರರಾದ ವಾಗೇಶ ರೇವಣಕರ(ನಾಯಕ),ಅಜಯ ಮಿರಾಶಿ(ಉಪನಾಯಕ),ಸಚಿನ್ ಮಿರಾಶಿ,ಮಹೇಂದ್ರ ರೇವಣಕರ, ದೇವಾನಂದ ಮಿರಾಶಿ, ಶ್ಯಾಮ ರೇವಣಕರ,ವಿಶಾಲ ಮಿರಾಶಿ,ದಿನೇಶ ಮಿರಾಶಿ,ವಾಮನ ಮಿರಾಶಿ,ಗುರು ರೇವಣಕರ,ರಾಮ ಮಿರಾಶಿ ಇದ್ದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಂದ್ಯ ಪುರುಷ ಸಚಿನ್ ಮಿರಾಶಿ,ಸರಣಿ ಶ್ರೇಷ್ಠ ಸಚಿನ್ ಮಿರಾಶಿ,ಹ್ಯಾಟ್ರಿಕ್ ಸಿಕ್ಸರ್ ಮಹೇಂದ್ರ ರೇವಣಕರ,ಉತ್ತಮ ಬೌಲರ್ ದೇವಾನಂದ ಮಿರಾಶಿ,ಅತಿ ಹೆಚ್ಚು ವಿಕೆಟ್ ದೇವಾನಂದ ಮಿರಾಶಿ,ಉತ್ತಮ ನಾಯಕ ವಾಗೇಶ ರೇವಣಕರ ಎನ್.ಎಸ್.ಎಸ್ ತಂಡ ನಗರಬಾವಿ ವೈಯುಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಕ್ರೀಡಾಕೂಟದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಸಂಘಟಕರು ಅಚ್ಚುಕಟ್ಟಾಗಿ ಮಾಡಿದ್ದರು.ಕ್ರೀಡಾಕೂಟವನ್ನು ದಾನಿಗಳ,ಊರ ನಾಗರೀಕರ ಸಹಕಾರದಲ್ಲಿ ಉತ್ತಮವಾಗಿ ಸಂಘಟಿಸಿದ್ದರು.

 
							 
			 
			 
			 
			 
		 
			 
			 
			