ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ,ಪ್ರೌಢ ಶಾಲೆಗಳಿಗೆ ದಸರಾ,ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ,ದೀಪಾವಳಿಯ ಹಬ್ಬದ ನಿಮಿತ್ತ ರಜೆಯ ಕಾರಣ ಶಾಲೆಗಳ ಆವರಣ ಶಾಂತವಾಗಿದ್ದವು.ಇಂದಿನಿಂದ ಮತ್ತೇ ಶಾಲೆಗಳು ಪ್ರಾರಂಭ ವಾಗಿದ್ದು,ಎಲ್ಲೆಡೆ ಚಿಣ್ಣರ ಕಲರವ ಕೇಳಿ ಬಂದಿತು.
ಮಕ್ಕಳು ರಜಾ ಅವಧಿಯಲ್ಲಿ ನೀಡಿದ ಅಭ್ಯಾಸದ ಮನೆ ಕೆಲಸವನ್ನು ಸಿದ್ಧಪಡಿಸಿ, ಸಮವಸ್ತ್ರ,ಪಠ್ಯಪುಸ್ತಕ,ದಿನನಿತ್ಯದ ವಸ್ತುಗಳೊಂದಿಗೆ ಶಾಲೆಯತ್ತ ಖುಷಿಯಿಂದ ಹೊರಟರು. ಮಧ್ಯಾಹ್ನ,ಸಂಜೆಯ ವೇಳೆ ಗುಡುಗು,ಮಿಂಚಿನೊಂದಿಗೆ ಮಳೆಯಾಗುತ್ತಿದ್ದು,ಶಾಲೆಯಲ್ಲಿ ಹಾಗೂ ದಾರಿಯಲ್ಲಿ ಎಚ್ಚರಿಕೆಯಿಂದ ಇರುವಂತೆ ಮಕ್ಕಳಿಗೆ ಪಾಲಕರು,ಪೋಷಕರು ಸೂಚನೆ ನೀಡಿದರು.
