ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಂದಿಗದ್ದೆ – ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಸುರಿದ ಗುಡುಗು ಮಿಂಚಿನೊಂದಿಗೆ ಭಾರಿ ಗಾಳಿ ಮಳೆಗೆ ರಸ್ತೆಯ ಮೇಲೆ ಮರ,ರೆಂಬೆ ಕೊಂಬೆಗಳು ಮುರಿದು ಬಿದ್ದವು.
ಸಂಜೆಯ ವೇಳೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬಿದ್ದ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿಹರಿದವು.ರಸ್ತೆಯ ಪಕ್ಕದ ಗಟಾರಗಳೆಲ್ಲ ನೀರಿನಿಂದ ತುಂಬಿ ರಸ್ತೆಯ ಮೇಲೆ ಹರಿದು ಹೋಯಿತು.ಕೃಷಿಕರ ತೋಟದಲ್ಲಿಯ ಬಾಳೆ,ಅಡಿಕೆ ಮರ ಗಳು ಅಲ್ಲಲ್ಲಿ ಮುರಿದು ಬಿದ್ದ ವರದಿಯಾಗಿದೆ.
ಮಳೆಗಾಲದಲ್ಲಿ ಈ ತರಹದ ಮಳೆ ಆಗಿಲ್ಲವಾಗಿತ್ತು, ನಿನ್ನೆಯ ದಿನದ ಬಿದ್ದ ಗಾಳಿ ಮಳೆಯು ಬಗ್ಗೆ ಸಾರ್ವಜನಿಕರಲ್ಲಿ ಆತಂಕ ತೀವ್ರ ಚರ್ಚೆಗೆ ಕಾರಣವಾಯಿತು.ಉಳವಿ ಗುಂದ ದಾಂಡೇಲಿ ರಾಜ್ಯ ಹೆದ್ದಾರಿಯ ಮೇಲೆ ಬಿದ್ದಿರುವ ಮರ,ರೆಂಬೆ,ಕೊಂಬೆಗಳನ್ನು ಅರಣ್ಯ ಇಲಾಖೆಯವರು,ವಾಹನ ಸವಾರರು ತೆರವುಗೊಳಿಸಿದರು. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ವಿದ್ಯುತ್ ವ್ಯತ್ಯಯವಾಯಿತು,ವಿದ್ಯುತ್ ಇಲಾಖೆಯವರು ತಕ್ಷಣ ಕಾರ್ಯ ಪ್ರವ್ರತ್ತ ರಾಗಿ ವಿದ್ಯುತ್ ಸಂಪರ್ಕ ಒದಗಿಸಿದರು.
