ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಶ್ರೀ ದನ್ವoತರಿ ಜಯಂತಿಯ ಅಂಗವಾಗಿ ತಾಲೂಕಿನ ಯರಮುಖ ದ ಸಹಕಾರಿ ಸಂಘದ ಸಭಾಂಗಣ ದಲ್ಲಿ ದನ್ವoತರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಿರಸಿಯ ಆರೋಗ್ಯ ಭಾರತೀಯ ಸಂಚಾಲಕರಾದ ನಾಗೇಶ ಪಿ, ಅವರು ಮಾತನಾಡಿ ವಾತಾವರಣ ದಲ್ಲಿನ ಮಲಿನತೆಯಿಂದ ನಮ್ಮ ಆರೋಗ್ಯ ಕೆಡುತ್ತದೆ ಇದನ್ನು ತಡೆಯುವ ಮೂಲಕ ನಾವು ನಮ್ಮ ಆರೋಗ್ಯ ಮತ್ತು ಸಮಾಜದಲ್ಲಿನ ಜನರ ಆರೋಗ್ಯ ಕಾಪಾಡುವುದೇ ಆರೋಗ್ಯ ಭಾರತಿ ಯ ಉದ್ದೇಶ ಎಂದು ಆ ಕುರಿತು ಮಾಹಿತಿ ನೀಡಿದರು.
ನಾಟಿವೈದ್ಯ ರಾದ ಶೇವಾಳಿಯ ಶ್ರೀಧರ ಏನ್ ದೇಸಾಯಿ ಮಾತನಾಡುತ್ತಾ ಎಲ್ಲ ಕಾಯಿಲೆ ಗಳಿಗೂ ಆಸ್ಪತ್ರೆಗೆ ಹೋಗದೇ ಸಣ್ಣ ಪುಟ್ಟ ಕಾಯಿಲೆ ಗಳಿಗೆ ಮನೆ ಮದ್ದನ್ನು ಬಳಸಿ ಆರೋಗ್ಯ ಕಾಪಾಡಿ ಕೊಳ್ಳಿ ಎಂದು ಮಾಹಿತಿ ನೀಡಿದರು ಯೋಗ ಗುರು ಗಣೇಶ ಹೆಗಡೆ ಮಾಡನಾಡಿ ಪ್ರತಿದಿನ ಧ್ಯಾನ, ಯೋಗ, ಪ್ರಾಣಾಯಾಮ ಗಳನ್ನು ಶ್ರದ್ದೆಯಿಂದ ಮಾಡುವ ಮೂಲಕ ಆರೋಗ್ಯ ಭಾಗ್ಯ ಪಡೆದು ಕೊಳ್ಳಿ ಎಂದರು. ಗುಂದ ಸೀಮಾ ಅಧ್ಯಕ್ಷ ದತ್ತಾತ್ರಯ ಹೆಗಡೆ ಮತ್ತು ಆರ್ ಎಸ್ ಎಸ್ ಮುಖಂಡ ದಯಾನಂದ ಮರಾಟೆ ಸಾಂದರ್ಭಿಕವಾಗಿ ಮಾತನಾಡಿದರು. ಮಾತೃ ಮಂಡಳಿ ಗುಂದ ಸೀಮಾ ಅಧ್ಯಕ್ಷೆ ಸೀತಾ ದಾನಗೇರಿ, ಮಾಜಿ ಅಧ್ಯಕ್ಷೆ ರಾಧಾ ಹೆಗಡೆ ಗೀತಾ ಭಾಗವತ ಕಾರ್ಯಕ್ರಮ ಉತ್ತಮವಾಗಿ ನಡೆಸಿಕೊಟ್ಟರು. ಊರಿನ ಗಣ್ಯರಾದ ಜಿ ಆರ್ ಭಟ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮ ಶಾಂತಿ ಮಂತ್ರ ದೊಂದಿಗೆ ಮುಕ್ತಾಯ ವಾಯಿತು
