ಸುದ್ದಿ ಕನ್ನಡ ವಾರ್ತೆ
ಶಿರಸಿ:ತಾಲೂಕಿನ ಉಂಚಳ್ಳಿಯಲ್ಲಿ ಗ್ರಾಮಸ್ಥರ ಕೋರಿಕೆಯ ಮೇರೆಗೆ ಶಿರಸಿಯ ಶ್ರೀರಾಮ ಭಜನಾ ತಂಡದ ಮುಖ್ಯಸ್ಥೆ ಶೋಭಾ ಸುರೇಶ ಸಕಲಾತಿಯವರಿಂದ ಅಕ್ಟೋಬರ 13 ರಿಂದ 17 ರ ವರೆಗೆ ಐದು ದಿನಗಳ ಕಾಲ ಭಜನಾ ತರಬೇತಿ ಶಿಬಿರವನ್ನು ದೀಪ ಪ್ರಜ್ವಲನ ಮಾಡುವ ಮೂಲಕ ವಿದ್ಯುಕ್ತವಾಗಿ ಆರಂಭಿಸಲಾಯಿತು. ಊರಿನ ಗ್ರಾಮಸ್ಥರು ಹಾಗೂ ಮಕ್ಕಳು ಭಾಗವಹಿಸಿದ್ದರು.ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಿ ಶಿಬಿರದ ಲಾಭ ಪಡೆಯಲು ಕರೆ ನೀಡಿದರು.

 
							 
			 
			 
			 
			 
		 
			 
			 
			