ಸುದ್ದಿ ಕನ್ನಡ ವಾರ್ತೆ

ಪಣಜಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿವರ್ಷ ಭಾರತೀಯ ಗಡಿಯಲ್ಲಿ ಸೈನಿಕರೊಂದಿಗೆ ದೀಪಾಳಿ ಹಬ್ಬವನ್ನು ಆಚರಿಸುತ್ತಾರೆ. 2014 ರಿಂದ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾದ ನಂತರ ಮೋದಿಯವರು ಈ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಪ್ರಸಕ್ತ ದೀಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿಯವರು ಗೋವಾ ಕಿನಾರಿಯಲ್ಲಿರುವ ಭಾರತೀಯ ನೌಕಾದಳದ ಸೈನಿಕರೊಂದಿಗೆ ಆಚರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋವಾದಲ್ಲಿ ಸೈನಿಕರೊಂದಿಗೆ ಮೋದಿಯವರು ಆಪರೇಶನ್ ಸಿಂಧೂರದ ಯಶಸ್ಸಿನ ಉತ್ಸವವನ್ನು ಆಚರಿಸಲಿದ್ದಾರೆ ಎನ್ನಲಾಗಿದೆ.

ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಧಾಳಿಯಲ್ಲಿ 26 ಜನ ಭಾರತೀಯರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತವು ಆಪರೇಶನ್ ಸಿಂಧೂರ್ ಕಾರ್ಯಾಚರಣೆ ನಡೆಸಿತ್ತು. ಈ ಮೂಲಕ 100 ಕ್ಕೂ ಹೆಚ್ಚು ಪಾಕಿಸ್ತಾನಿ ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಸಕ್ತ ದೀಪಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೋವಾದಲ್ಲಿರು ಭಾರತೀಯ ನೌಕಾದಳದ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ. ಆಪರೇಶನ್ ಸಿಂಧೂರದ ಯಶಸ್ಸಿನ ಸಂಭ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ಗೋವಾದಲ್ಲಿ ಆಚರಿಸಲಿದ್ದಾರೆ ಎನ್ನಲಾಗಿದೆ.

ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸೈನಿಕರೊಂದಿಗೆ ದೀಪಾವಳಿ ಆಚರಣೆ ಮಾಡುವ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 2014 ರಲ್ಲಿ ಪ್ರಧಾನಿ ಮೋದಿ ಲಡಾಕ್ ನ ಸಿಯಾಚಿನ್ ಗೆ ಭೇಟಿ ನೀಡಿದ್ದರು. 2015 ರಲ್ಲಿ ಪ್ರಧಾನಿಗಳು ಪಂಜಾಬ್ ನ ಡೋಗರಾಯಿ ಗೆ ಭೇಟಿ ನೀಡಿದ್ದರು. 2016 ರಲ್ಲಿ ಹಿಮಾಚಲ ಪ್ರದೇಶದ ಸುಮಡೊ ದಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದರು. 2017 ರಲ್ಲಿ ಜಮ್ಮು ಕಾಶ್ಮೀರದ ಗುರೇಜ್ ಗೆ ಭೇಟಿ ನೀಡಿದ್ದರು. 2018 ರಲ್ಲಿ ಉತ್ತರಾಖಂಡದ ಇಂಡೊ ಟಿಬೇಟಿಯನ್ ಗಡಿಗೆ ಭೇಟಿ ನೀಡಿದ್ದರು. 2019 ರಲ್ಲಿ ರಾಜೌರಿಯಲ್ಲಿ ಸೈನಿಕರೊಂದಿಗೆ ಹಬ್ಬ ಆಚರಿಸಿದ್ದರು. 2020 ರಲ್ಲಿ ಕರೋನಾ ಸಂದರ್ಭದಲ್ಲಿ ಪ್ರಧಾನಿಗಳು ರಾಜಸ್ಥಾನದ ಲೊಂಗೊವಾಲಾದಲ್ಲಿ ಸೈನಿಕರೊಂದಿಗೆ ಹಬ್ಬ ಆಚರಿಸಿದ್ದರು. 2021 ರಲ್ಲಿ ಜಮ್ಮೂ ಕಾಶ್ಮೀರದ ನವಶೇರಾದಲ್ಲಿ ಸೈನಿಕರೊಂದಿಗೆ ಹಬ್ಬ ಆಚರಿಸಿದ್ದರು. 2022 ರಲ್ಲಿ ಕಾರ್ಗಿಲ್ ಯುದ್ಧದ ವೀರಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿದ್ದರು. 2023 ರಲ್ಲಿ ಹಿಮಾಚಲಪ್ರದೇಶದಲ್ಲಿ ಹಾಗೂ 2024 ರಲ್ಲಿ ಗುಜರಾತ್ ದಲ್ಲಿ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದರು.

ಇದೀಗ 2025 ರಲ್ಲಿ ದೀಪಾವಳಿ ಹಬ್ಬವನ್ನು ಪ್ರಧಾನಿ ಮೋದಿಯವರು ಗೋವಾದ ಸೈನಿಕರೊಂದಿಗೆ ಆಚರಿಸಲಿದ್ದಾರೆ ಎನ್ನಲಾಗಿದೆ.