ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದಲ್ಲಿ ಸಪ್ತ ಸ್ವರ ಸೇವಾ ಸಂಸ್ಥೆಯ ವತಿಯಿಂದ ನಡೆದ ಹತ್ತು ದಿನಗಳ ಯಕ್ಷಗಾನ ದಶಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನ ಗೊಂಡಿತು. ಯಕ್ಷಗಾನ ದಶಮಾನೋತ್ಸವ ಹತ್ತನೇಯ ದಿನದ ದಿವಂಗತ ವಿಶ್ವೇಶ್ವರ ಎಸ್ ಹೆಗಡೆ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭದ ದೀಪ ಪ್ರಜ್ವಲನವನ್ನು ಜನಾರ್ದನ ಹೆಗಡೆ ನಿವೃತ್ತ ಮುಖ್ಯ ಶಿಕ್ಷಕರು ಗಣ್ಯರೊಂದಿಗೆ ನಡೆಸಿಕೊಟ್ಟರು.
ಆರ್.ಎ.ಭಟ್ಟರವರು ಅಧ್ಯಕ್ಷತೆ ವಹಿಸಿದ್ದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಹಾಲಿಂಗಪ್ಪಾ ದಾವಣಗೆರೆ,ಸೀತಾರಾಮ ಹೆಗಡೆ,ಅನಂತ ಭಟ್ಟ,ಸಂಜೀವಿನಿ ದೇಸಾಯಿ,ಭಾರತಿ ಹೆಗಡೆ ಇದ್ದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಸಂಸ್ಥೆಯ ಯಕ್ಷಗಾನ ದಶಮಾನೋತ್ಸವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.
ಸಪ್ತಸ್ವರ ಸೇವಾ ಸಂಸ್ಥೆಯ ವತಿಯಿಂದ ಸುಬ್ರಾಯ ಹೆಗಡೆ ಚೌಕಾ ಯಕ್ಷಗಾನ ಕ್ಷೇತ್ರ,ಭಾಸ್ಕರ ಭಟ್ಟ ಪೋಟೋಲಿ ಕೃಷಿ ಕ್ಷೇತ್ರ ಗೌರವಿಸಿ,ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಿಮ್ಮಪ್ಪ ಹಾಗೂ ಸುಮಂಗಲಾ ದೇಸಾಯಿ ದಂಪತಿಗಳನ್ನು ಸನ್ಮಾನಿಸಲಾಯಿತು.ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಲತಾ ಭಾಗವತ,ಸಂಧ್ಯಾ ದೇಸಾಯಿ,ಗೀತಾ ದೇಸಾಯಿ ನಡೆಸಿಕೊಟ್ಟರು. ಯಕ್ಷಗಾನ ಪ್ರದರ್ಶನದ ಮೊದಲು ಸಪ್ತಸ್ವರ ಸೇವಾ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿಯವರು ಎಲ್ಲಾ ಪದಾಧಿಕಾರಿಗಳ ಪರವಾಗಿ ದಶಮಾನೋತ್ಸವದ ಹಿಮ್ಮೇಳ,ಚಿತ್ರಕಲಾ ಪ್ರದರ್ಶನ,ಕಾರ್ಯಕ್ರಮದ ಪ್ರಾಯೋಜಕರು ಶಾಲು ಮತ್ತು ಹಾರ,ಗ್ಯಾಸ್ ಸಿಲಿಂಡರ, ಗಿಡಗಳು,ವೇದಿಕೆ ಸಿಂಹಾಸನ, ಊಟದ ಟೇಬಲ್,ವೇದಿಕೆ ದೀಪ,ಹತ್ತು ದಿನಗಳ ಊಟದ ಪ್ರಾಯೋಜಕರು, ತರಕಾರಿ,ತೆಂಗಿನ ಕಾಯಿ ಪೂರೈಕೆ,ಅಡುಗೆ ತಯಾರಿಕೆ,ಗ್ರಾಮ ಪಂಚಾಯತ, ಪೋಲಿಸ್ ಇಲಾಖೆ,ವಿದ್ಯುತ್ ಇಲಾಖೆ,ಅರಣ್ಯ ಇಲಾಖೆ, ಶಾಲೆ,ಸೇವಾ ಸಹಕಾರಿ ಸಂಘ,ಶ್ರೀ ಸೋಮೇಶ್ವರ ದೇವಸ್ಥಾನ ಯರಮುಖ,ಮೈಕ್ ವ್ಯವಸ್ಥೆ, ಶಾಮಿಯಾನ,ವೇಷ ಭೂಷಣ, ಸ್ಥಳದ ಸಹಕಾರ ನೀಡಿದ,ಪತ್ರಿಕಾ ವರದಿಗಾರರಿಗೆ, ದಾನಿಗಳಿಗೆ,ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಹೃದಯಪೂರ್ವಕವಾಗಿ ಅಭಿನಂದಿಸಿದರು.ನಂತರ ಸಪ್ತ ಸ್ವರ ಸೇವಾ ಸಂಸ್ಥೆಯವರಿಂದ ಗದಾಯುದ್ಧ ಯಕ್ಷಗಾನ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನ ಸೆಳೆಯಿತು.
