ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಾಪ್ಸಾ- ಗಣೇಶ ಪುರಿಯಲ್ಲಿನ ದರೋಡೆ ಪ್ರಕರಣದಲ್ಲಿ ಇಬ್ಬರು ಬಾಂಗ್ಲಾದೇಶೀಯರನ್ನು ಬಂಧಿಸಲಾಗಿದೆ ಎಂದು ಉತ್ತರಗೋವಾ ಪೆÇಲೀಸ್ ಅಧೀಕ್ಷಕ ರಾಹುಲ್ ಗುಪ್ತ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳು ಕರ್ನಾಟಕದ ವಿಜಯಪುರದಲ್ಲಿ ತಲೆಮರಿಸಿಕೊಂಡು ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೆÇಲೀಸರು ಆರು ಜನ ಮುಖ್ಯ ಶಂಕಿತರನ್ನು ಬೆನ್ನಟ್ಟಿದ್ದಾರೆ. ಈ ಪೈಕಿ ರಾಜು ಬಿ (27), ಶಫಿಕುಲ್ ಅಮೀರ್ (37) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಇಬ್ಬರೂ ಆರೋಪಿಗಳು ದರೋಡೆ ಪ್ರಕರಣದಲ್ಲಿ ಮುಖ್ಯ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಬಂದಿತರಿಬ್ಬರೂ ಕೂಡ ಸಂಬಂಧಿಕರೇ ಆಗಿದ್ದಾರೆ. ಇಬ್ಬರು ಆರೋಪಿಗಳು ಧರೊಡೆ ಪ್ರಕರಣದಲ್ಲಿ ಪ್ಲಾನ್ ಸಿದ್ಧಪಡಿಸಿದ್ದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗೋವಾದ ಮಾಪ್ಸಾ ದಲ್ಲಿ ದರೋಡೆ ನಡೆಸಿ ಆರು ಜನ ಆರೋಪಿಗಳು ಕರ್ನಾಟಕದ ವಿಜಯಪುರಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ಪೆÇಲೀಸರು ಇನ್ನುಳಿದ ಆರೋಪಿಗಳಿಗಾಗಿ ಶೋಧಕಾರ್ಯ ಕೈಗೆತ್ತಿಕೊಂಡಿದ್ದಾರೆ. ಪೆÇಲೀಸರು ಎಲ್ಲ ಆರೋಪಿಗಳ ಗುರುತು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೆÇಲೀಸ್ ಅಧಿಕಾರಿಗಳಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ, ಈ ಪ್ರಕರಣದ ಆರೋಪಿಗಳನ್ನು ಬಂಧಿಸಲು ನಾಲ್ಕು ವಿಶೇಷ ಪೆÇಲೀಸ್ ತಂಡಗಳನ್ನು ರಚಿಸಲಾಗಿದ್ದು ಈ ಪೆÇಲೀಸ್ ತಂಡಗಳು ಸದ್ಯ ಹೊರರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.