ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಜೋಯಿಡಾ ಹಾಗೂ ರಾಮನಗರ ದ ಕೆಲವು ಭಾಗಗಳಲ್ಲಿ ಮಧ್ಯಾಹ್ನ,ಸಂಜೆಯ ವೇಳೆ ಗುಡುಗು,ಸಿಡಿಲು,ಮಿಂಚಿನೊಂದಿಗೆ ಭಾರಿ ಮಳೆಯಾಗುತ್ತಿದೆ.
ಈಗಾಗಲೇ ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗಿರುವ ಸಂದರ್ಭದಲ್ಲಿ ಹಿಂಗಾರು ಮಳೆಯ ಆರ್ಭಟ ಶುರುವಾಗಿದೆ. ಭತ್ತದ ಬೆಳೆಯ ತೆನೆಗಳು ಹೂ ಬಿಡುವ ಸಮಯವಾಗಿದ್ದರಿಂದ ಭತ್ತ ಬೆಳೆಯುವ ರೈತರು ಆತಂಕ ಪಡುವಂತಾಗಿದೆ.ಕೊಳೆ ರೋಗದಿಂದ ತತ್ತರಿಸಿದ್ದ ಅಡಿಕೆ ಬೆಳೆಗಾರರು ಕೊಳೆ ರೋಗದ ಅಡಿಕೆ ಒಣಗಿಸಲು ಹಾಗೂ ಸ್ವಲ್ಪ ಇದ್ದ ಅಡಿಕೆಯನ್ನು ಕೊಯ್ಯುವ ತಯಾರಿ ಮಾಡಲು ತೋಟದಲ್ಲಿಯ ಕಳೆ ತೆಗೆಯುವ ಕೆಲಸ ಮಾಡಲು ಒಳ್ಳೇಯ ಬಿಸಿಲಿನ ವಾತಾವರಣದ ನಿರೀಕ್ಷೆ ಯಲ್ಲಿರುವಾಗ ಮಳೆಯ ವಾತಾವರಣದಿಂದ ತೊಂದರೆಗೆ ಒಳಗಾಗಿದ್ದಾರೆ.
ರಾತ್ರಿ,ಬೆಳಗಿನ ವೇಳೆ ಮಂಜು ಮಿಶ್ರಿತ ಚಳಿ,ಹಗಲಿನ ವೇಳೆ ಮೋಡ ಮಿಶ್ರಿತ ಬಿಸಿಲು, ಮಧ್ಯಾಹ್ನ, ಸಂಜೆಯ ವೇಳೆ ಗುಡುಗು ಮಿಂಚಿನೊಂದಿಗೆ ಮಳೆ ವಾತಾವರಣದಲ್ಲಿಯ ಬದಲಾವಣೆ ನಮ್ಮಂತಹ ಭತ್ತ ಹಾಗೂ ಅಡಿಕೆ ಬೆಳೆಗಾರರಿಗೆ ತೊಂದರೆ ಉಂಟು ಮಾಡುತ್ತಿದೆ.(ಗಣೇಶ. ಪಿ,ಕೃಷಿಕ).