ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಪಂಚಾಯತ ಕಾರ್ಯಾಲಯದಲ್ಲಿ ಕರ್ನಾಟಕ ಸರ್ಕಾರದ ಪಂಚಾಯತ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ,ಜಿಲ್ಲಾ ಪಂಚಾಯತ ಉತ್ತರಕನ್ನಡ (ಕಾರವಾರ),ತಾಲೂಕಾ ಪಂಚಾಯತ ಜೋಯಿಡಾ,ಗ್ರಾಮ ಪಂಚಾಯತ ಅವೇಡಾ ಇವುಗಳ ಸಹಯೋಗದಲ್ಲಿ ಒರಿಯೆಂಟೇಷನ್ ದೂರದೃಷ್ಟಿ ಯೋಜನೆಯ ಗ್ರಾಮ ಸಭೆ ನಡೆಯಿತು.
ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಲೀನಾ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.ನರೇಗಾ ಯೋಜನೆಯ ಅಧಿಕಾರಿ ಸಮೀರ್ ಅವರು ಒರಿಯೆಂಟೇಷನ್ ದೂರದೃಷ್ಟಿ ಯೋಜನೆಯ ಕುರಿತು ವಿವರವಾದ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ಭಗವತಿರಾಜ್, ಉಪಾಧ್ಯಕ್ಷೆ ಲಕ್ಷ್ಮಿ ರಂಗಯ್ಯ ಮುರಾರಿ,ಸದಸ್ಯರಾದ ಅಜಿತ್ ಥೋರವತ್, ಸದಸ್ಯರು,ಗ್ರಾಮ ಆಡಳಿತ ಅಧಿಕಾರಿ,ಅರಣ್ಯ ಇಲಾಖೆಯ ಅಧಿಕಾರಿಗಳು,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಪಂಚಾಯತ ವ್ಯಾಪ್ತಿಯ ವಿವಿಧ ಇಲಾಖೆಯ ಸಿಬ್ಬಂದಿಗಳು,ಸಾರ್ವಜನಿಕರು ಭಾಗವಹಿಸಿದ್ದರು.