ಸುದ್ದಿ ಕನ್ನಡ ವಾರ್ತೆ

ಪಣಜಿ: ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೃಷಿ ಮಂತ್ರಿ ಆಗಿದ್ದ ರವಿ ನಾಯಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಂಗಳವಾರ ರಾತ್ರಿ 11:30 ಸುಮಾರು ಅವರಿಗೆ ಹೃದಯಘಾತ ಸಂಭವಿಸಿದೆ. ನಂತರ ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.

ರವಿ ನಾಯ್ಕ್ ರವರ ನೇತೃತ್ವದಲ್ಲಿ ಬೋಂಡಾ ನಗರ ಪಾಲಿಕೆಯ ನೂತನ ಕಟ್ಟಡದ ನಿರ್ಮಾಣ ಕಾರ್ಯ ನೆರವೇರಿತ್ತು. ಈ ಕಟ್ಟಡದ ಉದ್ಘಾಟನೆಯನ್ನು ರವಿನಾಯಕ್ ರವರು ಮಂಗಳವಾರ ನೆರವೇರಿಸಬೇಕಿತ್ತು ಆದರೆ ಅನಾರೋಗ್ಯದ ಕಾರಣ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಅಕ್ಟೋಬರ್ 15 ರಂದು ಮಧ್ಯಾಹ್ನ 3 ಗಂಟೆಗೆ ಬೋಂಡಾದ ಕಡಪ ಬಾಂಧ ್ನಲ್ಲಿ ರವಿನಾಯಕರವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.