ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ನಗರದ ಐಬಿ ಪಕ್ಕದ ರಸ್ತೆಯಲ್ಲಿದ್ದ ದೊಡ್ಡಬೇಣದ ಶಿವಾನಂದ ಮರಾಠಿಯವರ ಕೃಷಿ ಗೋದಾಮು ಶನಿವಾರ ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅನಾಹುತ ಸಂಭವಿಸಿದೆ.
ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸಿದ್ದಾರೆ. ವ್ಯಾಪಾರ ವಹಿವಾಟು ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದ ಸಾಮಗ್ರಿಗಳು ಬೆಂಕಿಗೆ ಆಹುತಿ ಯಾಗಿ ಅಪಾರ ಪ್ರಮಾಣದಲ್ಲಿ ಹಾನಿ ಆಗಿದೆ. ಕೂಡಲೇ ಅಗ್ನಿಶಾಮಕ ದಳದ ಎಫ್ ಎಸ್ ಒ ಶಂಕರಪ್ಪ ಅಂಗಡಿ,ಸಿಬ್ಬಂದಿಗಳಾದ ಪ್ರಣಯ ಕೊಚ್ರೇಕರ,ನಾಗರಾಜ ನಾಯಕ,ಅಮಿತ ಗುನಗಿ,ಸಲೀಂ ನದಾಫ್,ಶಿವಾನಂದ ಕೋಡಿ ಆಗಮಿಸಿ ಬೆಂಕಿಯನ್ನು ನಂದಿಸಿದರು.