ಸುದ್ದಿ ಕನ್ನಡ ವಾರ್ತೆ

. ಯಲ್ಲಾಪುರ:ತಾಲೂಕಿನ ರಾಷ್ಟೀಯ ಸ್ವಯಂ ಸೇವಕ ಸಂಘ ಕಿರವತ್ತಿ ಮಂಡಳದ ವತಿಯಿಂದ ಸಂಘ ಶತಾಭ್ದಿಯ ನಿಮಿತ್ತ ವಿಜಯ ದಶಮಿ ಉತ್ಸವ ಕಾರ್ಯಕ್ರಮ ದಿನಾಂಕ:12 – 10- 2025 ರ ರವಿವಾರ ಮಧ್ಯಾಹ್ನ 3-00 ಗಂಟೆಗೆ ಶ್ರೀಗ್ರಾಮದೇವಿ ದೇವಸ್ಥಾನ ಕಿರವತ್ತಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಮಹೇಶ ಪೂಜಾರ ಸಾಮಾಜಿಕ ಕಾರ್ಯಕರ್ತರು,ಕಿರವತ್ತಿ,ವಕ್ತಾರರಾಗಿ ಶ್ರೀ ಕೃಷ್ಣ ಶಹಪುರಕರ್ ದಾಂಡೇಲಿ ಜಿಲ್ಲಾ ಹಿಂದೂ ಜಾಗರಣಾ ಗತಿವಿದಿ ಸಂಯೋಜಕರು ಉಪಸ್ಥಿತರಿರುವರು. ಕಿರವತ್ತಿ ಮಂಡಳದ ಪ್ರತಿ ಹಿಂದೂ ಕುಟುಂಬದ ಸಹೋದರರು, ಸಹೋದರಿಯರು,ಶ್ರದ್ಧೆಯ ತಾಯಂದಿರು ಈ ಕಾರ್ಯಕ್ರಮ ದಲ್ಲಿ ಹತ್ತು ನಿಮಿಷ ಮುಂಚಿತವಾಗಿ ಭಾಗವಹಿಸಬೇಕೆಂದು ಸ್ವಯಂ ಸೇವಕರು ಕಿರವತ್ತಿ ಮಂಡಳದವರು ವಿನಂತಿಸಿಕೊಂಡಿದ್ದಾರೆ.