ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಯಾವುದೇ ಸಂಘಟನೆಗೆ ಪರಿಶ್ರಮ ತುಂಬಾ ಅಗತ್ಯ, ಇಂಥ ಕೆಲಸ ಗುಂದ ದಲ್ಲಿ ನಡೆದಿದೆ ಎಂದು ಮಾಜಿ ಶಾಸಕ ಗಂಗಾಧರ ಭಟ್ ಹೇಳಿದರು ಅವರು ಜೋಯಿಡಾ ದ ಯರಮುಖ ದಲ್ಲಿ ನಡೆಯುತ್ತಿರುವ ಯಕ್ಷಗಾನ ದಶಮಾನೋತ್ಸವ ದಲ್ಲಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಾವುದೇ ಸಂಘಟನೆ ಉಳಿಯ ಬೇಕಾದರೆ ಭಾವನೆ ಗಳು ಒಳ್ಳೆಯದಿರಬೇಕಾಗುತ್ತದೆ, ಹಾಗಿದ್ದರೆ, ಮಾತ್ರ ಸಂಘಟನೆ ಬೆಳೆಯುತ್ತದೆ. ನಾಯಕತ್ವದ ಗುಣ ಉತ್ತಮ ವಾಗಿರಬೇಕು ಎನ್ನುವುದಕ್ಕೆ, ನಾನು ಶಾಸಕ ನಾಗಿದ್ದಾಗ, ಅಂದಿನ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಯವರು ಜೋಯಿಡಾ ಕ್ಕೆ ಬಂದಾಗ, ಇಲ್ಲಿನ ಶಿಕ್ಷಣ ಸಮಸ್ಯೆ ಹೇಳಿದಾಗ, ಏನು ಬೇಕು ಎಂದು ಕೇಳಿದರು, ನಾನು ಇಲ್ಲಿನ ಸಮಸ್ಯೆ ಹೇಳುತ್ತಾ ಮೂರು ಕಾಲೇಜು ಗಳನ್ನು ಕೇಳಿದೆ, ಅದಕ್ಕೆ ಅವರು 8 ದಿನ ಗಳಲ್ಲಿ ಮಂಜೂರಿ ನೀಡಿ, ತಮ್ಮ ಹಿರಿಮೆ ತೋರಿಸಿದರುಇದರಿಂದ ಜೋಯಿಡಾ ದ ಎಲ್ಲ ವಿದ್ಯಾರ್ಥಿ ಗಳಿಗೆ ಹೊರತಾಲೂಕಿನವರು ಕೂಡ ಕಾಲೇಜು ಶಿಕ್ಷಣ ಕಲಿಯುವಂತಾಗಿದೆ. ಇಂತ ನಾಯಕತ್ವ ನಮ್ಮಲ್ಲಿ ಬೆಳೆಯ ಬೇಕು ಎಂದರು.
ಇದೇ ಸಂದರ್ಭದಲ್ಲಿ ಮಂಗಲಾ ಹೆಗಡೆ ಅಮರಾ ಅವರ ಯಕ್ಷ ಅಮರ ಎಂಬ ಪುಸ್ತಕ ವನ್ನು ಮಾಜಿ ಶಾಸಕ ಗಂಗಾಧರ ಭಟ್ ಬಿಡುಗಡೆ ಮಾಡಿದರು, ಇದೇ ಸಂದರ್ಭದಲ್ಲಿ, ಕಾರವಾರ ದ ಶಿವಾನಂದ ನಾಯಕ ಮತ್ತು ಅಂಕೋಲಾ ದ ಸದಾನಂದ ದೇಶಬಂಡಾರಿ ಅವರನ್ನು ಗೌರವಪೂರ್ವಕ ಸನ್ಮಾನಿಸಲಾಯಿತು ಯಕ್ಷ ಅಮರ ಪುಸ್ತಕ ಬರೆದ ಮಂಗಲಾ ಹೆಗಡೆ ತಮ್ಮ ಸಾಹಿತ್ಯದ ಕುರಿತು,ಮತ್ತು ಗೌರವ ಸನ್ಮಾನಿತರು ತಮ್ಮ ಅನಿಸಿಕೆ ತಿಳಿಸಿದರು.ಕಾರ್ಯಕ್ರಮ ದ ಕುರಿತು ರೇಖಾ ಉಪಾದ್ಯೆ, ಭಾರತಿ ಹೆಗಡೆ ಇತರರು ಮಾತನಾಡಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಅಮರಾದ ಆರ್ ಎನ್ ಹೆಗಡೆ ವಹಿಸಿ ಮಾತನಾಡಿದರು.ಮಹಾಬಲೇಶ್ವರ ಉಪಾಧ್ಯ ವೇದಿಕೆಯಲ್ಲಿ ಅಧ್ಯಕ್ಷೆ ಸುಮಂಗಲಾ ದೇಸಾಯಿ ದಯಾನಂದ ಉಪಾಧ್ಯ, ಗಜಾನನ ದಬಲಿ ಭಾಗವತ ಆನಂದ ಆಗೇರ ಇತರರು ಉಪಸ್ಥಿತರಿದ್ದರು.ಶ್ರೀಲತಾ ಭಾಗವತ ಮತ್ತು ಗೀತಾ ದೇಸಾಯಿ ಕಾರ್ಯಕ್ರಮ ನಡೆಸಿಕೊಟ್ಟರು ನಂತರ ಭಾಗವತ ಆನಂದ ಆಗೇರರ ಭಾಗವತಿಕೆಯಲ್ಲಿ ವೀರ ಬರ್ಬರಿಕ ಯಕ್ಷಗಾನ ಅಂಕೋಲಾ ದ ಮಾರಿಕಾಂಬಾ ಯಕ್ಷಗಾನ ಮೇಳ ದವರಿಂದ ನಡೆಯಿತು