ಸುದ್ಧಿಕನ್ನಡ ವಾರ್ತೆ
ಪಣಜಿ(ಮಾಪ್ಸಾ): ಗಣೇಶಪುರಿ, ಮಾಪುಸಾದಲ್ಲಿ ಡಾ. ಮಹೇಂದ್ರ ಘನೇಕರ್ ಅವರ ಬಂಗಲೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಹೈದರಾಬಾದ್‍ನ ಇಬ್ಬರು ಶಂಕಿತರನ್ನು ಪೆÇಲೀಸರು ಬಂಧಿಸಿದ್ದಾರೆ. ಇದಲ್ಲದೆ, ಕಾರು ಚಾಲಕ, ಆತನ ಸಹಚರ ಮತ್ತು ಇತರರ ಮೇಲೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ. ಆರಂಭಿಕ ತನಿಖೆಯಲ್ಲಿ, ದೋನಾಪಾವ್ಲಾ ಮತ್ತು ಮಾಪುಸಾ ದರೋಡೆಗಳಲ್ಲಿ ಒಂದೇ ಗ್ಯಾಂಗ್ ಭಾಗಿಯಾಗಿದೆ ಎಂದು ಪೆÇಲೀಸರು ಶಂಕಿಸಿದ್ದಾರೆ.

 

ಮಂಗಳವಾರ ಬೆಳಗಿನ ಜಾವ 3 ರಿಂದ 5 ಗಂಟೆಯ ನಡುವೆ ನಡೆದ ಘಟನೆಯ ನಂತರ, ಪೆÇಲೀಸರು ತನಿಖಾ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದಾರೆ. ಮಂಗಳವಾರ, ಡಾ. ಘನೇಕರ್ ಅವರ ಬಂಗಲೆಯನ್ನು ಸಶಸ್ತ್ರಗಳೊಂದಿಗೆ ಏಳು ದರೋಡೆಕೋರರು ಸುಮಾರು 35 ಲಕ್ಷ ಮೌಲ್ಯದ ಆಸ್ತಿಯನ್ನು ಲೂಟಿ ಮಾಡಿದ್ದರು. ದರೋಡೆಯ ನಂತರ ದರೋಡೆಕೋರರು ಬೆಳಗಾವಿಗೆ ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದ್ದರಿಂದ, ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಪೆÇಲೀಸರು ತನಿಖಾ ತಂಡಗಳನ್ನು ಸಕ್ರಿಯಗೊಳಿಸಿದರು. ಕಾರ್ಯಾಚರಣೆ ನಡೆಸಿದ ಪೋಲಿಸರು ಬೆಂಗಳೂರು ಮತ್ತು ಹೈದರಾಬಾದ್‍ನಿಂದ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.

 

ಹೆಚ್ಚಿನ ತನಿಖೆಗಾಗಿ ಸುಮಾರು ಎಂಟು ಪೆÇಲೀಸ್ ತಂಡಗಳನ್ನು ನೆರೆಯ ರಾಜ್ಯಗಳ ವಿವಿಧ ಸ್ಥಳಗಳಿಗೆ ಕಳುಹಿಸಲಾಗಿದೆ. ಈ ತಂಡಗಳಲ್ಲಿ ಕೆಲವು ತಂಡಗಳು ಕರ್ನಾಟಕದ ಬೆಳಗಾವಿಯಿಂದ ಬೆಂಗಳೂರಿನವರೆಗೆ ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದರೆ, ಕೆಲವು ತಂಡಗಳು ಕೊಲ್ಲಾಪುರ, ಮುಂಬೈ, ವಿಜಪುರ, ಹೈದರಾಬಾದ್‍ನಲ್ಲಿ ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿವೆ. ದರೋಡೆಕೋರರು ತಪ್ಪಿಸಿಕೊಂಡ ಮಾರ್ಗದ ಎಲ್ಲಾ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೆÇಲೀಸರು ಪರಿಶೀಲಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಅದರಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

 

ಮಂಗಳವಾರ ಬೆಳಿಗ್ಗೆ, ಡಾ. ಘನೇಕರ್ ಕುಟುಂಬ ಗಾಢ ನಿದ್ರೆಯಲ್ಲಿದ್ದಾಗ, ದರೋಡೆಕೋರರು ಬಂಗಲೆಗೆ ನುಗ್ಗಿ 35 ಲಕ್ಷ ರೂ.ಗಳನ್ನು ದೋಚಿದ್ದಾರೆ, ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ.

ದರೋಡೆಕೋರರು ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನು ಕದ್ದಿದ್ದಾರೆ. ದರೋಡೆಕೋರರು ಡಾ. ಘನೇಕರ್ ಅವರ ಮೊಬೈಲ್ ಫೆÇೀನ್ ಮತ್ತು ಮಾರುತಿ ಕಾರನ್ನು ಸಹ ಕದ್ದಿದ್ದಾರೆ. ಮಂಗಳವಾರ ಬೆಳಿಗ್ಗೆ 5.45 ಕ್ಕೆ ಪಣಜಿ ಬಸ್ ನಿಲ್ದಾಣದ ಬಳಿ ಅದು ಪತ್ತೆಯಾಗಿದೆ. ಅವರಲ್ಲಿ ಆರು ಜನರು ಪಣಜಿಯಿಂದ ಹಳದಿ ಕಪ್ಪು ಬಣ್ಣದ ಟ್ಯಾಕ್ಸಿಯನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಆ ಸಮಯದಲ್ಲಿ, ಅವರು ಟ್ಯಾಕ್ಸಿ ಚಾಲಕನನ್ನು ಬೆಳಗಾವಿಗೆ ಕರೆದೊಯ್ಯಲು ಕೇಳಿಕೊಂಡರು. ಅವರು ಗೋವಾದ ಹೊರಗೆ ಹೋಗುತ್ತಿದ್ದಾಗ, ಟ್ಯಾಕ್ಸಿ ಚಾಲಕ ಓಲ್ಡ್ ಗೋವಾ – ಖೋರ್ಲಿಯಿಂದ ದರೋಡೆಕೋರರಿಗೆ ಖಾಸಗಿ ಕಾರನ್ನು ವ್ಯವಸ್ಥೆ ಮಾಡಿಸಿದನು ಎನ್ನಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.