ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ರಾಣಕೋಣದ ರಾಯಭಾಗ್ ಬೀಚ್ ನಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾದ ಘಟನೆ ನಡೆದಿದೆ. ಮೀನುಗಾರಿಕೆ ನಡೆಸಿ ದಡಕ್ಕೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಕುರಿತಂತೆ ಲಭ್ಯವಾದ ಮಾಹಿತಿಯ ಅನುಸಾರ- ಮೀನುಗಾರಿಕೆ ಪೂರ್ಣಗೊಳಿಸಿ ದಡಕ್ಕೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆಯೇ ಬೋಟ್ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಸಮುದ್ರದಲ್ಲಿ ಸಿಲುಕಿದ್ದ ಬೋಟನ್ನು ದಡಕ್ಕೆ ಎಳೆದು ತರಲು ಪ್ರಯತ್ನಿಸಿದರು, ಆದರೆ ಅದು ಸಾಧ್ಯವಾಗಿಲ್ಲ. ನಂತರ ಜೆಸಿಬಿಗೆ ಹಗ್ಗ ಕಟ್ಟಿ ಬೋಟನ್ನು ದಡಕ್ಕೆ ಎಳೆದು ತರುವಲ್ಲಿ ಯಸಸ್ವಿಯಾಗಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.