ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೈಶ್ಯವಾಟಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಕೋಲ್ವಾ ದಲ್ಲಿ ಎರಡು ಮಸಾಜ್ ಪಾರ್ಲರ್ ಮೇಲೆ ಮಂಗಳವಾರ ರಾತ್ರಿ ಪೆÇಲೀಸರು ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಒಂಬತ್ತು ಯುವತಿಯರನ್ನು ಬಿಡುಗಡೆಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಮೂವರು ಮಹಿಳೆಯರನ್ನು ಪೆÇಲೀಸರು ಬಂಧಿಸಿದ್ದಾರೆ. ವೈಶ್ಯವಾಟಿಕೆ ಅವ್ಯವಹಾರ ನಡೆಸುತ್ತಿದ್ದವರು ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಹಾಗೂ ಮಣಿಪುರ ರಾಜ್ಯಗಳಿಂದ ಗೋವಾಕ್ಕೆ ವೈಶ್ಯಾವಾಟಿಕೆಗೆ ಯುವತಿರನ್ನು ಕರೆತರುತ್ತಿದ್ದರು ಎನ್ನಲಾಗಿದೆ.
ಹ್ಯಾಪಿನೆಸ್ ವೀಲ್ ಗ್ರೋ ಯುನಿಸೆಕ್ಸ್ ಸಲೂನ್ ಹೆಸರಿನ ಅಡಿಯಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದ ರಾಧಿಕಾ ಶರ್ಮ ಎಂಬ ಮಹಿಳೆಯನ್ನು ಪೆÇಲೀಸರು ಬಂಧಿಸಿದ್ದಾರೆ. ಈ ಮಸಾಜ್ ಪಾರ್ಲರ್ ನಲ್ಲಿ ಇದ್ದ 5 ಯುವತಿಯರನ್ನು ಬಿಡುಗಡೆಗೊಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸ್ ನಿರೀಕ್ಷಕ ಸುದೀಕ್ಷಾ ನಾಯಕ್ ಹೆಚ್ಚಿನ ತನಿಕ ಕಾರ್ಯ ಕೈಗೊಂಡಿದ್ದಾರೆ.
ಅಂತೆಯೇ ರಾಯಲ್ ಸ್ಪಾ ಹೆಸರಿನ ಅಡಿಯಲ್ಲಿ ನಡೆಸಲಾಗುತ್ತಿದ್ದ ಮತ್ತೊಂದು ಮಸಾಜ್ ಪಾರ್ಲರ್ ಮೇಲು ಪೆÇಲೀಸರು ದಾಳಿ ನಡೆಸಿದ್ದಾರೆ. ಈ ಮಸಾಜ್ ಪಾರ್ಲರ್ ನಲ್ಲಿ ಇದ್ದ ನಾಲ್ಕು ಯುವತಿಯರನ್ನು ಬಿಡುಗಡೆಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಇಷಿತ ಚೋಟು ಹಾಗೂ ಚಾಂದನಿ ಚೋಟು ಎಂಬ ರಾಜಸ್ಥಾನ ಮೂಲದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.
ಕೊಲ್ವಾ ಸಮುದ್ರ ತೀರದಿಂದ ಹತ್ತಿರವೇ ಇದ್ದ ಈ ಎರಡು ಮಸಾಜ್ ಪಾರ್ಲರ್ಗಳ ನ್ನು ಕಳೆದ ಹಲವು ವರ್ಷಗಳಿಂದ ನಡೆಸಲಾಗುತ್ತಿತ್ತು. ಆಶ್ಚರ್ಯಕರ ಸಂಗತಿ ಎಂದರೆ ಈ ಎರಡು ಮಸಾಜ್ ಪಾರ್ಲರ್ ಗಳಿಗೆ ಯಾವುದೇ ರೀತಿಯ ಪರವಾನಿಗೆ ಕೂಡ ಇರಲಿಲ್ಲ ಎನ್ನಲಾಗಿದೆ. ಆದರೆ ಇಷ್ಟು ವರ್ಷಗಳ ಕಾಲ ಈ ಎರಡು ಮಸಾಜ್ ಪಾರ್ಲರ್ಗಳು ಪರವಾನಿಗೆ ಇಲ್ಲದೆ ಹೇಗೆ ರಾಜಾರೋಷವಾಗಿ ನಡೆಸುತ್ತಿದ್ದರು ಎಂಬುದು ಪ್ರಶ್ನೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಗೋವಾ ಪೆÇಲೀಸ್ ಅಧಿಕ ಟಿಕಮ್ ಸಿಂಗ್ ವರ್ಮ ರವರು ಮಾಹಿತಿ ನೀಡಿ ಎರಡು ಮಸಾಜ್ ಪಾರ್ಲರ್ ಗಳಲ್ಲಿ ಇದ್ದ 9 ಯುವತಿಯರು ಎಲ್ಲರೂ ಹೊರರಾಜ್ಯದವರೇ ಆಗಿದ್ದು ಈ ಎಲ್ಲ ಯುವತಿಯರು ಕಳೆದ ಹಲವು ವರ್ಷಗಳಿಂದ ಗೋವಾದಲ್ಲಿಯೇ ವಾಸಿಸುತ್ತಿದ್ದರು ಎಂಬ ಮಾಹಿತಿ ನೀಡಿದ್ದಾರೆ.