ಸುದ್ಧಿಕನ್ನಡ ವಾರ್ತೆ
ಪಣಜಿ: ಹೆಚ್ಚಿನ ಹಣ ನೀಡುವುದಾಗಿ ಭರವಸೆ ನೀಡಿ ಗೋವಾದ ಸಾಸಷ್ಠಿ ತಾಲೂಕಿನ ವ್ಯಕ್ತಿಯೊಬ್ಬರಿಂದ 1.52 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ, ಗೋವಾ ಪೆÇಲೀಸರ (Police)  ಸೈಬರ್ ವಿಭಾಗವು ಶಂಕಿತ ರೋನಿ ಫಿಲಿಪ್ ಸಿಕ್ವೇರಾ (ಮುಂಬೈ-ಮಹಾರಾಷ್ಟ್ರ) ಎಂಬಾತನನ್ನು ಬಂಧಿಸಿದ್ದಾರೆ. ಶಂಕಿತ ಮತ್ತು ಆತನ ಪತ್ನಿ ಇಂತಹ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದು, ಅವರ ಖಾತೆಗೆ 35 ಲಕ್ಷ ರೂ. ಜಮಾ ಆಗಿರುವುದು ಕಂಡುಬಂದಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಗೋವಾದ ಸಾಸಷ್ಠಿ ತಾಲೂಕಿನ ದೂರುದಾರರು ಸೆಪ್ಟೆಂಬರ್ 26 ರಂದು ಈ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ನೀಡಿರುವ ಮಾಹಿತಯಂತೆಯೇ, ಆರೋಪಿಯು ದೂರುದಾರರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿ ಹೆಚ್ಚಿನ ಹಣ ಮರುಪಾವತಿ ನೀಡುವುದಾಗಿ ಭರವಸೆ ನೀಡಿದ್ದಾನೆ. ಅದರ ನಂತರ, ದೂರುದಾರರ ಬಳಿ ವಿವಿಧ ಬ್ಯಾಂಕ್‍ಗಳ ಖಾತೆಗಳಿಗೆ 1 ಕೋಟಿ 52 ಲಕ್ಷ ರೂ. ಜಮಾ ಮಾಡುವಂತೆ ಆರೋಪಿ ಒತ್ತಾಯಿಸಿದ್ದಾನೆ. ಅದರಂತೆಯೇ ಇವರು ಹಣವನ್ನೂ ವರ್ಗಾವಣೆ ಮಾಡಿದ್ದಾರೆ. ನಂತರ ಆತನ ಸಂಪರ್ಕ ಇಲ್ಲದಂತಾಗಿದೆ. ತಾನು ಮೋಸ ಹೋಗಿದ್ದೇನೆ ಎಂದು ಅರಿತುಕೊಂಡ ನಂತರ, ದೂರುದಾರರು ಸೈಬರ್ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

 

ದೂರನ್ನು ಸ್ವೀಕರಿಸಿದ ಸೈಬರ್ ಇಲಾಖೆಯ ಪೆÇಲೀಸ್ (police) ಇನ್ಸ್‍ಪೆಕ್ಟರ್ ದೀಪಕ್ ಪೆಡ್ನೇಕರ್, ಅಪರಿಚಿತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 318(4), 319(2) ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಮೇಲಿನ ಮೊತ್ತದಲ್ಲಿ 35 ಲಕ್ಷ ರೂ.ಗಳನ್ನು ಮುಂಬೈ – ಮಹಾರಾಷ್ಟ್ರದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಸೈಬರ್ ಇಲಾಖೆಗೆ ಮಾಹಿತಿ ಸಿಕ್ಕಿತು.

ಅದರಂತೆ, Police ಸಬ್-ಇನ್ಸ್‍ಪೆಕ್ಟರ್ ಅನಿಲ್ ಪೆÇೀಲೇಕರ್, ಹವಾಲ್ದಾರ್ ಅನಯ್ ನಾಯಕ್ ಮತ್ತು ಕಾನ್‍ಸ್ಟೆಬಲ್ ಸಿದ್ದರಾಮಯ್ಯ ಮಠ ನೇತೃತ್ವದ ಇನ್ಸ್‍ಪೆಕ್ಟರ್ ದೀಪಕ್ ಪೆಡ್ನೇಕರ್ ನೇತೃತ್ವದ ತಂಡವನ್ನು ಮುಂಬೈಗೆ ಕಳುಹಿಸಲಾಯಿತು. ಅದರ ನಂತರ, ತಂಡವು ರೋನಿ ಫಿಲಿಪ್ ಸಿಕ್ವೇರಾ ಎಂಬಾತನನ್ನು ಬಂಧಿಸಿ ಗೋವಾಕ್ಕೆ ಕರೆತಂದಿತು. ಸಿಕ್ವೇರಾನನ್ನು ಬಂಧಿಸಿ ಮಾರ್ಗೋವಾದ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು , ಅಲ್ಲಿ ಶಂಕಿತನನ್ನು ಪೆÇಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.