ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಯರಮುಖ ಬಯಲು ರಂಗ ಮಂದಿರದಲ್ಲಿ ಸಪ್ತಸ್ವರ ಸೇವಾ ಸಂಸ್ಥೆಯವರಿಂದ ಯಕ್ಷಗಾನ ದಶಮಾನೋತ್ಸವ ಕಾರ್ಯಕ್ರಮಕ್ಕೆ ಯರಮುಖ ಸೋಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಆಳ್ಕೆ ದೀಪ ಬೆಳಗಿಸುವಯದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉತ್ತರಕನ್ನಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಬ್ರಾಯ ವಾಳ್ಕೆ ಮಾತನಾಡಿ ಯಕ್ಷಗಾನ ಇದು ಗಂಡು ಮೆಟ್ಟಿದ ಕಲೆ ಎನ್ನುವ ಮಾತಿದೆ ,ಆದರೆ ಈಗ ಹೆಣ್ಣು ಮಕ್ಕಳು ಸಹಿತ ಯಕ್ಷಗಾನದಲ್ಲಿ ಪಾತ್ರಗಳನ್ನು ಮಾಡುವುದರ ಮೂಲಕ ಯಕ್ಷಗಾನದ ಗೌರವವನ್ನು ಹೆಚ್ಚಿಸಿದ್ದಾರೆ, ಯಕ್ಷಗಾನ ಇದು ಪ್ರಾಚೀನ ಕಲೆಯಾಗಿದೆ, ಯಕ್ಷಗಾನ ಕಲೆ ಎಲ್ಲಿ ಮುಗಿದೇ ಹೋಯಿತು ಎನ್ನುವ ಸಂದರ್ಭದಲ್ಲಿ ಹಳ್ಳಿಗಾಡಿನ ಜನರು ಮತ್ತೆ ಯಕ್ಷಗಾನ ಮಾಡುವುದರ ಮೂಲಕ ಯಕ್ಷಗಾನವನ್ನು ಬೆಳೆಸುತ್ತಿದ್ದಾರೆ.ಸಪ್ತಸ್ವರ ಸಂಸ್ಥೆಯವರು ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಸಂತಸದ ಸಂಗತಿ ಎಂದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸದಸ್ಯ ಶ್ರೀಧರ್ ಭಾಗ್ವತ್ ನಮ್ಮೂರಿನ ಯಕ್ಷಗಾನ ಕಲಾವಿದರಾಗಿ ದಿವಂಗತರಾದ ಗಣ್ಯರ ವೇದಿಕೆ ಮಾಡಿರುವುದು ಸಂತೋಷ, ನಮ್ಮೂರಿನ ಮಕ್ಕಳಿಗೆ ಯಕ್ಷಗಾನ ತರಬೇತಿ ಸಿಗುತ್ತಿರುವುದು ಸಂತಸದ ಸಂಗತಿ ಎಂದರು.
ಗುಂದ ಸೀಮಾ ಪರಿಷತ್ತಿನ ಅಧ್ಯಕ್ಷ ಡಿ.ಟಿ ಹೆಗಡೆ ಮಾತನಾಡಿ ತಮ್ಮ ಗುರುಗಳಾದ ರಾಮಕೃಷ್ಣ ಭಟ್ಟ ಮತ್ತು ನಿವೃತ್ತ ಶಿಕ್ಷಕ ಶಂಕರಲಿಂಗ ಮಾಸ್ತರರು ಎಂದೇ ಗುಂದ ಭಾಗದಲ್ಲಿ ಹೆಸರು ಮಾಡಿದ ಸುಬ್ರಾಯ ಗಣಪತಿ ಶಂಕರಲಿಂಗ ಅವರ ವೇದಿಕೆಯಲ್ಲಿ ನಾನು ಭಾಗಿಯಾಗಿರುವುದು ನನಗೆ ಬಹಳಷ್ಟು ಸಂತೋಷವಾಗಿದೆ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವೈದಿಕರಾದ ಪ್ರಸನ್ನ ಭಟ್ಟ ಹಾಗೂ ಜೇನು ಕೃಷಿಕ ಕಾರ್ತಿಕ ದೇಸಾಯಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಪ್ತಸ್ವರ ಸೇವಾ ಸಂಸ್ಥೆ ಅಧ್ಯಕ್ಷೆ ಸುಮಂಗಲಾ ದೇಸಾಯಿ ಮಾತನಾಡಿ 23 ವರ್ಷಗಳಿಂದ ಎಷ್ಟೇ ಕಷ್ಟವಾದರು ಸಂಸ್ಥೆ ನಡೆಸಿಕೊಂಡು ಬಂದಿದ್ದೆನೆ, ಊರಿನ ಜನರ ಸಹಕಾರ ಹಾಗೂ ಎಲ್ಲಾ ಜನಪ್ರತಿನಿಧಿಗಳು ಮತ್ತು ಸರ್ಕಾರದ ಸಹಕಾರದಿಂದ ಯಕ್ಷಗಾನ ,ತಾಳಮದ್ದಳೆ,ಇತರೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲು ಸಹಕಾರಿಯಾಗಿದೆ.ಭಾಗವತರಾದ ಆನಂದು ಅಗೇರಾ ಮತ್ತು ಮಂಗಲಾ ಹೆಗಡೆ ಯವರ ಕುಟುಂಬದವರು ಯಕ್ಷಗಾನ ನಡೆಸಲು ಬಹಳಷ್ಟು ಸಹಕಾರ ನೀಡಿದ್ದಾರೆ ಎಂದರು.
ವೇದಿಕೆಯಲ್ಲಿ ಗಣಪತಿ ಸುಬ್ರಾಯ ಶಂಕರಲಿಂಗ,ಗಣಪತಿ ಕಣ್ಣೀಜಡ್ಡಿ ಆನಂದ ಆಗೇರ ಇತರರು ಇದ್ದರು. ಕಾರ್ಯಕ್ರಮವನ್ನು ಕ.ಸಾ.ಪ ಜಿಲ್ಲಾ ಸದಸ್ಯೆ ಸೀತಾ ದಾನಗೇರಿ ಹಾಗೂ ಸಂಧ್ಯಾ ದೇಸಾಯಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ನಂತರ ಊರಿನ ಚಿಕ್ಕ ಮಕ್ಕಳಿಂದ ಧರ್ಮಾಂಗದ ದಿಗ್ವಿಜಯ ಯಕ್ಷಗಾನ ನಡಯಿತು ಊಟದ ವ್ಯವಸ್ಥೆ.
ನಂದಿಗದ್ದೆ ಸಹಕಾರಿ ಸಂಘದ ಸದಸ್ಯ ಪರಮೇಶ್ವರ ಸಿದ್ದಿ ಹಾಗೂ ಆಕಾಶವಾಣಿ ಕಲಾವಿದೆ ಗೌರಿ ಸಿದ್ದಿ ಅವರಿಂದ 10 ದಿನಗಳ ಕಾರ್ಯಕ್ರಮಕ್ಕೆ ರಾತ್ರಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿರುವ ಬಗ್ಗೆ ಸಾರ್ವಜನಿಕರಲ್ಲಿ ಪ್ರಶಂಸೆ ವ್ಯೆಕ್ತವಾಗಿದೆ. ಯಕ್ಷಗಾನ ಬೆಳೆಸುವ ದೃಷ್ಟಿಯಿಂದ ನಾನು ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ಪರಮೇಶ್ವರ ಸಿದ್ದಿ ಹೇಳಿ ಹರ್ಷ ವ್ಯಕ್ತಪಡಿಸಿದ್ದಾರೆ