ಸುದ್ದಿ ಕನ್ನಡ ವಾರ್ತೆ

ಪಣಜಿ: ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಗೋವಾ ರಾಜ್ಯದ ಪ್ರವಾಸಿ ಸೀಜನ್ ಆರಂಭಗೊಂಡಿದೆ. ಗುರುವಾರ ರಾಜ್ಯದ ಪ್ರವಾಸಿ ಸೀಜನ್ ಮೊಟ್ಟಮೊದಲ ವಿಮಾನ ರಷ್ಯಾದಿಂದ ಗೋವಾದ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ಟೋಬರ್ 2ರಂದು ಆಗಮಿಸಿದೆ. ಕೋವಿಡ್ 19 ನಂತರ ಗೋವಾ ರಾಜ್ಯಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ನಿರೀಕ್ಷೆ ಮೂಡಿದೆ.

ಗೋವಾಕ್ಕೆ ರಷ್ಯಾದಿಂದ ಆಗಮಿಸಿದ ಪ್ರವಾಸಿಗರನ್ನು ಗೋವಾದ ಪಾರಂಪರಿಕ ಪದ್ಧತಿಯಂತೆ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರವಾಸಿಗರನ್ನು ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಪ್ರವಾಸಿಗರನ್ನು ಸ್ವಾಗತಿಸಲು ರಾಜ್ಯ ಪ್ರವಾಸ ಉದ್ಯಮ ಇಲಾಖೆಯು ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ದೀಪ ನೃತ್ಯ, ಡೋಲು ಕುಣಿತ, ಹಾಗೂ ಧನಗರ ನೃತ್ಯದ ಮೂಲಕ ವಿದೇಶಿ ಪ್ರವಾಸಿಗರನ್ನು ಸ್ವಾಗತಿಸಲಾಯಿತು. ಪ್ರತಿಯೊಬ್ಬ ಪ್ರವಾಸಿಗರಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಂಚಾಲಕ ಕೇದಾರ್ ನಾಯಕ್, ಉಪಸಂ ಚಾಲಕ ಜಯೇಶ ಕೋಣಕೋಣಕರ್, ಹಾಗೂ ಟ್ರಾವೆಲ್ ಉದ್ಯೋಗದ ಪ್ರಮುಖರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಇಲಾಖೆಯ ಅಭಿಪ್ರಾಯದ ಪ್ರಕಾರ ಪ್ರಸಕ್ತ ವರ್ಷ ಗೋವಾ ರಾಜ್ಯಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ  ಹೆಚ್ಚಾಗಲಿದೆ.