ಸುದ್ಧಿಕನ್ನಡ ವಾರ್ತೆ

ಪಣಜಿ: ರೈಲ್ವೆ ಪ್ರಯಾಣಿಕರು ಅಪಘಾತಕ್ಕೊಳಗಾಗುತ್ತಿರುವ ಹಲವು ಘಟನೆಗಳು ಮರುಕಳಿಸುತ್ತಿವೆ. ಕೊಂಕಣ ರ್ಥಲ್ವೆಯಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ಚಲಿಸುತ್ತಿದ್ದ ರೈಲಿನಿಂದ ಕೆಳಕ್ಕೆ ಬಿದ್ದ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಆರ್‍ಪಿಎಫ್ ತಂಡದ ತ್ವರಿತ ರಕ್ಷಣಾ ಕಾರ್ಯದಿಂದ ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಂಕಣ ರೈಲ್ವೆಯು ಈ ಕುರಿತ ವೀಡಿಯೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್‍ಲೋಡ್ ಮಾಡಿದ್ದು ರೈಲ್ವೆ ಪ್ರಯಾಣಿರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೊಂಕಣ ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಅನುಸಾರ- ಮಂಗಳೂರು ಸೆಂಟ್ರಲ್-ಮಡಗಾಂವ ಜಂಕ್ಷನ್ (Train No–06602) ಸ್ಪೆಶಲ್ ಟ್ರೇನ್‍ನಲ್ಲಿ ಈ ಅಪಘಾತ ಸಂಭವಿಸಿದೆ. ಉಡುಪಿ ರೈಲು ನಿಲ್ದಾಣದಿಂದ ರೈಲು ಚಲಿಸುತ್ತಿದ್ದ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರೋರ್ವರು ರೈಲು ಭೋಗಿಯ ಬಾಗಿಲಿನಿಂದ ರೈಲ್ವೆ ಪ್ಲ್ಯಾಟ್ ಫಾರ್ಮನಲ್ಲಿ ಕೆಳಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಆರ್‍ಪಿಎಫ್ ಮಹಿಳಾ ಸಿಬ್ಬಂಧಿಗಳು ಈ ವಿದ್ಯಾರ್ಥಿನಿಯ ರಕ್ಷಣೆಗೆ ಧಾವಿಸಿದ್ದಾರೆ. ಕೂಡಲೆ ಆಕೆಯನ್ನು ರಕ್ಷಿಸಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಆರ್‍ಪಿಎಫ್ ಸಿಬ್ಬಂಧಿಗಳ ತ್ವರಿತ ಕಾರ್ಯಾಚರಣೆಯಿಂದ ವಿದ್ಯಾರ್ಥಿನಿಯನ್ನು ರಕ್ಷಿಸಲು ಸಾಧ್ಯವಾಗಿದೆ.

ರೈರು ಹತ್ತುವ ಅಥವಾ ಇಳಿಯುವ ಸಂದರ್ಭದಲ್ಲಿ ಹಲವು ಪ್ರಯಾಣಿಗಳು ಅವಸರ ಮಾಡುತ್ತಾರೆ, ಅಗತ್ಯ ಕಾಳಜಿ ತೆಗೆದುಕೊಳ್ಳುವುದಿಲ್ಲ, ಇದರಿಂದಾಗಿ ಇಂತಹ ಅವಘಡಗಳು ಸಂಭವಿಸುತ್ತದೆ. ಹಲವು ಸಂದರ್ಭದಲ್ಲಿ ಪ್ಲ್ಯಾಟ್ ಫಾರ್ಮಗೆ ರೈಲು ಬರುತ್ತಿರುವಾಗಿ ರೈಲಿನ ವೇಗವನ್ನು ಗಮನಿಸದೆಯೇ ಅವಸರವಾಗಿ ಪ್ರಯಾಣಿಕರು ಇಳಿಯಲು ಹೋಗಿ ಕೆಳಕ್ಕೆ ಬಿದ್ದಂತಹ ಹಲವು ಘಟನೆಗಳಿವೆ. ಇದರಿಂದಾಗಿ ರೈಲು ಹತ್ತುವಾಗ ಅಥವಾ ಇಳಿಯುವಾಗ ಪ್ರಯಾಣಿಕರು ಅಗತ್ಯ ಕಾಳಜಿ ತೆಗೆದುಕೊಳ್ಳಬೇಕು ಎಂದು ಕೊಂಕಣ ರೈಲು ಪ್ರಯಾಣಿಕರಿಗೆ ಸೂಚನೆ ನೀಡಿದೆ.